ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳುನಾಡು ಚುನಾವಣೆ, ಡಿಎಂಕೆ ಆಂತರಿಕ ಸಮೀಕ್ಷೆ ಲೀಕ್!

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಆಡಳಿತಾರೂಢ ಡಿಎಂಕೆ ನಡೆಸಿದೆ ಎನ್ನಲಾದ ಆಂತರಿಕ ಸಮೀಕ್ಷೆಯ ವರದಿ ಈಗ ಸಂಚಲನ ಮೂಡಿಸಿದೆ. ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಮತ್ತೆ ಡಿಎಂಕೆ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಮುಖ್ಯಮಂತ್ರಿ ಹುದ್ದೆಗೆ ಜನರ ಮೊದಲ ಆಯ್ಕೆ ಯಾರು ಎಂಬ ಪ್ರಶ್ನೆಗೆ ಪ್ರಸ್ತುತ ಸಿಎಂ ಎಂ.ಕೆ. ಸ್ಟಾಲಿನ್ ಅವರೇ ಮುಂಚೂಣಿಯಲ್ಲಿದ್ದಾರೆ.

• ಎಂ.ಕೆ. ಸ್ಟಾಲಿನ್: ಶೇ. 44

• ಎಡಪ್ಪಾಡಿ ಪಳನಿಸ್ವಾಮಿ (AIADMK): ಶೇ. 28

• ದಳಪತಿ ವಿಜಯ್ (TVK): ಶೇ. 24

• ಸೀಮನ್ (NTK): ಶೇ. 3

ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಾರ್ಟಿ ಈ ಬಾರಿ ಶೇ. 24ರಷ್ಟು ಜನಪ್ರಿಯತೆ ಗಳಿಸಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ವಿಜಯ್ ಅವರ ವೋಟ್ ಶೇರ್ ಯಾರ ಮೈತ್ರಿಕೂಟಕ್ಕೆ ಹೊಡೆತ ನೀಡಲಿದೆ ಮತ್ತು ಅವರು ಕಿಂಗ್ ಮೇಕರ್ ಆಗಲಿದ್ದಾರಾ ಎಂಬುದು ಈಗಿನ ದೊಡ್ಡ ಚರ್ಚೆ. ಸ್ಟಾಲಿನ್ ಸರ್ಕಾರದ ಕೆಲಸದ ಬಗ್ಗೆ ಶೇ. 50ರಷ್ಟು ಜನ (ಅತ್ಯುತ್ತಮ ಮತ್ತು ಉತ್ತಮ) ತೃಪ್ತಿ ವ್ಯಕ್ತಪಡಿಸಿದ್ದರೆ, ಶೇ. 25ರಷ್ಟು ಜನ ಸಾಧಾರಣ ಎಂಬ ಅಭಿಪ್ರಾಯ ನೀಡಿದ್ದಾರೆ. ಒಟ್ಟಿನಲ್ಲಿ ಡಿಎಂಕೆ ಸಮೀಕ್ಷೆಯು ಸ್ಟಾಲಿನ್ ಪರವಾಗಿದ್ದರೂ, ವಿಜಯ್ ಅವರ ಎಂಟ್ರಿ ಚುನಾವಣಾ ಕಣವನ್ನು ರೋಚಕಗೊಳಿಸಿರುವುದಂತೂ ನಿಜ.

Edited By : Vijay Kumar
PublicNext

PublicNext

07/04/2026 09:51 pm

Cinque Terre

4.88 K

Cinque Terre

0

ಸಂಬಂಧಿತ ಸುದ್ದಿ