ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ವಿದ್ಯಾರ್ಥಿಗಳ ಬಾಳಿನಲ್ಲಿ ಹೊಸ ಆಶಾಕಿರಣ ಮೂಡಿಸುತ್ತಿದೆ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳು

ಬೆಳಗಾವಿ: ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸುವ ವಸತಿ ಶಾಲೆಗಳು ಪ್ರತಿಭಾವಂತ ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸರಿಸಮಾನವಾದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಚೆಲ್ಲುತ್ತಿದೆ.

ಬಡತನ ಅಥವಾ ಕೌಟುಂಬಿಕ ಸಮಸ್ಯೆಗಳಿಂದಾಗಿ ಶಿಕ್ಷಣದಿಂದ ವಂಚಿತರಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ವಸತಿ ಸೌಲಭ್ಯವನ್ನು ಉಚಿತವಾಗಿ ಒದಗಿಸುವ ಮೂಲಕ ಅವರ ಭವಿಷ್ಯವನ್ನು ರೂಪಿಸಲು ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯು ಒಂದು ಹೆಜ್ಜೆ ಮುಂದೆ ಇದೆ.

ಬೆಳಗಾವಿ ಜಿಲ್ಲೆಯಲ್ಲಿ ಪ್ರಮುಖವಾಗಿ ಮೂರಾರ್ಜಿ ದೇಸಾಯಿ ವಸತಿ ಶಾಲೆಗಳು, ಕಿತ್ತೂರು ರಾಣಿಚನ್ನಮ್ಮ ವಸತಿ ಶಾಲೆಗಳು, ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಹಾಗೂ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳನ್ನು ಸಮಾಜ ಕಲ್ಯಾಣ ಇಲಾಖೆಯು ನಿರ್ವಹಿಸುತ್ತಿದೆ.‌ ಈ ಶಾಲೆಗಳಲ್ಲಿ 6 ನೇ ತರಗತಿಗೆ ಪ್ರವೇಶ ಪರೀಕ್ಷೆ ಬರೆದು ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ 12 ನೇ ತರಗತಿವರೆಗೆ ಉಚಿತವಾಗಿ ವಸತಿ ಸಹಿತ ಶಿಕ್ಷಣ ನೀಡಲಾಗುತ್ತದೆ.‌

ಈ ಶಾಲೆಗಳಲ್ಲಿ ಸರ್ಕಾರದ ನಿಯಮಾನುಸಾರ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 75% ಸೀಟುಗಳು ಮೀಸಲಿದ್ದು, ಸಾಮಾನ್ಯ ಪಂಗಡಗಳನ್ನು ಹೊರತುಪಡಿಸಿ 25% ಇತರೆ ಪಂಗಡಗಳಿಗೆ ಪ್ರವೇಶ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಬೌದ್ಧಿಕ, ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಈ ಶಾಲೆಗಳ ಪ್ರಮುಖ ಗುರಿಯಾಗಿದೆ. ಪಠ್ಯದೊಂದಿಗೆ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಇಲ್ಲಿ ಸಮಾನ ಅವಕಾಶ ನೀಡಲಾಗುತ್ತಿದೆ.

ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ

*ಕಂಪ್ಯೂಟರ್ ಲ್ಯಾಬ್

*ಗ್ರಂಥಾಲಯ

*ವಿಜ್ಞಾನ ಪ್ರಯೋಗಾಲಯ

*ಸ್ಮಾರ್ಟ್ ಕ್ಲಾಸ್ ರೂಮ್

*ಸುಸಜ್ಜಿತ ಕ್ಲಾಸ್ ರೂಮ್

*ಸಂಗೀತ ತರಬೇತಿ

*ಕ್ರೀಡಾ ತರಬೇತಿ

*ಉಚಿತ ನೋಟ್ ಬುಕ್

*ಉಚಿತ ಪುಸ್ತಕ

*ಸ್ಟೇಶನರಿ ಕಿಟ್

*ಶೂ ಮತ್ತು ಸಾಕ್ಸ್

*ಸಮವಸ್ತ್ರ

*ಬ್ಯಾಗ್

ಉಚಿತವಾಗಿ ವಿತರಣೆ ಮಾಡಲಾಗುತ್ತದೆ

ವಿದ್ಯಾರ್ಥಿಗಳ ಆರೋಗ್ಯ ಹಾಗೂ ಭದ್ರತೆಗಾಗಿ ಹಾಸ್ಟೆಲ್ ಹಾಗೂ ಶಾಲಾ ಆವರಣದಲ್ಲಿ

*ಸಿಸಿಟಿವಿ ಕಂಗ್ಗಾವಲು,

*ಸೆಕ್ಯೂರಿಟಿ

*ವಿದ್ಯಾರ್ಥಿನಿಯರ ಸಮಸ್ಯೆ ನಿವಾರಣೆಗೆ ಮಹಿಳಾ ಸಮಿತಿ ರಚನೆ

*ಖಾಯಂ ನರ್ಸಿಂಗ್ ಆಫಿಸರ್ ನಿಯೋಜನೆ

*ಖಾಯಂ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ

*ಪ್ರತಿ ತಿಂಗಳು ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸಲಾಗುತ್ತಿದೆ

ವಸತಿಗಾಗಿ ವಿದ್ಯಾರ್ಥಿಗಳಿಗೆ ಬೇಕಾಗುವ

*ಕಾಟ್

*ಬೆಡ್

*ಚಾದರ

*ಬೆಡ್ ಶೀಟ್

*ತಲೆದಿಂಬು

*ಮಚ್ಛರದಾನಿ

*ಸೋಪ್ ಕಿಟ್

*ಪ್ಲೇಟ್

*ವಾಟೆ

*ಪೆಟ್ಟಿಗೆ(ಟ್ರಂಕ್)

ಉಚಿತವಾಗಿ ವಿತರಿಸಲಾಗುತ್ತಿದೆ

ಪ್ರತಿ ವಸತಿ ಶಾಲೆಯಲ್ಲಿ ಬೇರೆ ಬೇರೆ ತಾಲೂಕುಗಳಿಂದ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದರಿಂದ ಎಲ್ಲಾ ಶಾಲೆಗಳಲ್ಲೂ ಒಂದೇ ರೀತಿಯ ಮೆನು ಪ್ರಕಾರ ಊಟ ನೀಡಲಾಗುತ್ತಿದೆ.

*ಬೆಳಗ್ಗೆ ಚಹಾ ಮತ್ತು ಉಪಹಾರ

*ಮಧ್ಯಾಹ್ನ ಊಟಕ್ಕೆ ಚಪಾತಿ ಅಥವಾ ರೊಟ್ಟಿ

*ಸಾಯಂಕಾಲ ಉಪಹಾರ

*ರಾತ್ರಿ ಊಟ, ಜೊತೆ ಬಾಳೆಹಣ್ಣು ಅಥವಾ ಮೊಟ್ಟೆ

*ಪ್ರತಿ ರವಿವಾರ ರಾತ್ರಿ ಮಾಂಸಾಹಾರ ಊಟ/ ಸಸ್ಯಹಾರ

*ಕುಡಿಯಲು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯು ಇದೆ.

ಬೆಳಗಾವಿ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯು ಒಟ್ಟು 28 ವಸತಿ ಶಾಲೆಗಳನ್ನು ನಿರ್ವಹಿಸುತ್ತಿದ್ದು, ಅದರಲ್ಲಿ 7 ಬಾಲಕಿಯರ ವಸತಿ ಶಾಲೆಗಳಿವೆ. ಇದರಲ್ಲಿ ಎರಡು ಶಾಲೆಗಳನ್ನು ಉನ್ನತಿಕರಿಸಿ ಪಿಯುಸಿ ಸೈನ್ಸ್ ವಿದ್ಯಾಭ್ಯಾಸ ನೀಡಲಾಗುತ್ತಿದೆ.‌ ಈ ಶಾಲೆಗಳಲ್ಲಿ ಸರ್ಕಾರದ ಮಂಜುರಾತಿ ಸಂಖ್ಯೆ ಪ್ರಕಾರ 2735 ಗಂಡು ಮಕ್ಕಳು ಹಾಗೂ 4485 ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡುತ್ತಿದ್ದಾರೆ. ಕೆಲ ಶಾಲೆಗಳು ಆರಂಭವಾದಾಗಿಂದ ಇಲ್ಲಿಯವರೆಗೆ ಎಸ್‌ಎಸ್‌ಎಲ್‌ಸಿಯಲ್ಲಿ 100% ಫಲಿತಾಂಶ ಹೊಂದಿದೆ.

ಒಟ್ಟಿನಲ್ಲಿ ವಸತಿ ಶಾಲೆಗಳ ಮುಖ್ಯ ಉದ್ದೇಶವು ಕೇವಲ ಪಠ್ಯ ಶಿಕ್ಷಣ ನೀಡುವುದಲ್ಲದೆ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಪರಿಸರವನ್ನು ಕಲ್ಪಿಸಲು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶ್ರಮವು ಬಹಳಷ್ಟಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/04/2026 05:28 pm

Cinque Terre

156.82 K

Cinque Terre

1