ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಮೇ 3 ರಂದು ಕಿತ್ತೂರು ಸಂಸ್ಥಾನದ ಹೊಸ ಸಂಶೋಧನೆಗಳು ಹಾಗೂ ವಂಶಜರು ವಿಶೇಷ ಕಾರ್ಯಾಗಾರ

ಧಾರವಾಡ : 1824ರ ನಂತರದ ಕಿತ್ತೂರು ಸಂಸ್ಥಾನದ ಹೊಸ ಸಂಶೋಧನೆಗಳು ಹಾಗೂ ವಂಶಜರು ವಿಷಯವಾಗಿ ಮೇ 3 ರಂದು ರಾ.ಹ. ದೇಶಪಾಂಡೆ ಭವನದಲ್ಲಿ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಾಹಿತಿ ಬಾಳಣ್ಣ ಶೀಗಿಹಳ್ಳಿ ಹೇಳಿದರು.

ಧಾರವಾಡ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಿತ್ತೂರು ಸಂಸ್ಥಾನ ಕುರಿತು ಸಾಕಷ್ಟು ಕೃತಿಗಳು, ಸಂಶೋಧನೆಗಳು ಈಗಾಗಲೇ ನಡೆದಿವೆ. ಜೊತೆಗೆ ಸಂಸ್ಥಾನದ ವಂಶಜರ ಬಗ್ಗೆ ಕನ್ನಡಿಗರಿಗೆ ಅಷ್ಟೊಂದು ಮಾಹಿತಿಯೂ ಇಲ್ಲ. ಈ ಹಿನ್ನೆಲೆಯಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೇ 3ರ ಬೆಳಗ್ಗೆ 10.30ಕ್ಕೆ ಪಾಲಿಕೆ ಮಾಜಿ ಸದಸ್ಯ ಸಿ.ಎಸ್‌. ಪಾಟೀಲ ಉದ್ಘಾಟಿಸುವರು. ಮಾಜಿ ಶಾಸಕ ಎ.ಬಿ. ದೇಸಾಯಿ ಅಧ್ಯಕ್ಷತೆ, ಡಾ.ಅರವಿಂದ ಯಾಳಗಿ ಆಶಯ ನುಡಿ ಹೇಳಲಿದ್ದಾರೆ ಎಂದರು.

ಕಿತ್ತೂರು ಸಂಸ್ಥಾನದ ಕುರಿತು ಪಿಎಚ್‌.ಡಿ ಮಾಡಿದ ಡಾ. ಮಲ್ಲಿಕಾರ್ಜುನ ಮಿಂಚ, ಡಾ.ಕೆ.ಎನ್‌. ನರಹರಿ ಹಾಗೂ ಡಾ. ನೀಲಪ್ಪ ವಾಲಿಕಾರ ಅವರನ್ನು ಗೌರವಿಸಲಾಗುವುದು. ಮಧ್ಯಾಹ್ನ 12 ರಿಂದ ಮೊದಲ ಗೋಷ್ಠಿಯಲ್ಲಿ ಕಿತ್ತೂರು ಸಂಸ್ಥಾನದ ವಂಶಜರಿಂದ ಚಿಂತನೆ, 2ನೇ ಗೋಷ್ಠಿಯಲ್ಲಿ 1824ರ ನಂತರ ಕಿತ್ತೂರು ಸಂಸ್ಥಾನದ ಹೊಸ ಸಂಶೋಧನೆಗಳು ಹಾಗೂ ವಂಶಜರು ಎಂಬ ಗೋಷ್ಠಿಗಳು ಜರುಗಲಿವೆ. ಈ ಗೋಷ್ಠಿಗಳಲ್ಲಿ ವಂಶಜರು ಸೇರಿದಂತೆ ಸಂಪನ್ಮೂಲ ತಜ್ಞರು ಭಾಗವಹಿಸುತ್ತಾರೆ. ಸಂಜೆ 4ಕ್ಕೆ ಸಮಾರೋಪ ಭಾಷಣವನ್ನು ಇತಿಹಾಸ ತಜ್ಞ ಡಾ.ಎಸ್‌. ಷಡಾಕ್ಷರಯ್ಯ ಮಾಡಲಿದ್ದು, ಡಾ.ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸುತ್ತಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಿತ್ತೂರು ಸಂಸ್ಥಾನದ ವಂಶಜರಾದ ಸೋಮಶೇಖರ ದೇಸಾಯಿ, ಯುವರಾಜ ದೇಸಾಯಿ ಇದ್ದರು.

Edited By : Vinayak Patil
Kshetra Samachara

Kshetra Samachara

30/04/2026 09:57 pm

Cinque Terre

1.56 K

Cinque Terre

0

ಸಂಬಂಧಿತ ಸುದ್ದಿ