ಹುಬ್ಬಳ್ಳಿ : ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಹುಬ್ಬಳ್ಳಿ ಕೆ.ಎಮ್.ಸಿ.ಆರ್.ಐ ಆಸ್ಪತ್ರೆ ಆವರಣದಲ್ಲಿ ಇರುವ ಇಂದಿರಾ ಕ್ಯಾಂಟಿನ್'ನಲ್ಲಿ ಊಟ, ಉಪಹಾರ ಮಾಡಿದವರಿಗೆ ರೋಗ
ತರುವ ವಾತಾವರಣ ಏರ್ಪಟ್ಟಿದೆ.
ಎಸ್..! ವೀಕ್ಷಕರೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಇರೋ ಇಂದಿರಾ ಕ್ಯಾಂಟಿನ್ ಮೇಲ್ಛಾವಣಿ ಸೋರುತ್ತಿದೆ, ಶುದ್ಧ ಕುಡಿಯುವ ನೀರಿನ ಪಾಯಿಂಟ್ ಕೆಟ್ಟು ಹೋಗಿದೆ, ಕ್ಯಾಂಟಿನ್ ಗೋಡೆ, ಕೈ ತೊಳೆಯುವ ಸ್ಥಳಗಳಲ್ಲಿ ಶಿಲೀಂಧ್ರ ಕಟ್ಟಿವೆ.
ನೀರಿನ ಪೈಪ್ಲೈನ್ ಸಂಪೂರ್ಣ ವ್ಯವಸ್ಥೆ ಕಲುಷಿತವಾಗಿದ್ದು, ನಲ್ಲಿಗಳ ಸ್ಥಿತಿ ನೋಡುವಂತಿಲ್ಲ, ಸಿಸಿ ಕ್ಯಾಮರಾ ವ್ಯವಸ್ಥೆ ಅಂತೂ ಮೊದಲೇ ಇಲ್ಲ , ಕ್ಯಾಂಟಿನ್ ಸುತ್ತ ಅನೈರ್ಮಲ್ಯ ತಾಂಡವವಾಡುತ್ತಿದೆ, ಕ್ಯಾಂಟಿನ್ ಒಳಗೆ ಇರುವ ಶೌಚಾಲಯ ಉಪಯೋಗಕ್ಕೆ ಇರದೆ ಹಾಳಾಗಿದೆ.
ಕೈ ತೊಳೆಯುವ ಸಿಂಕ್, ವರಾಂಡ ತುಂಬಾ ಗಲೀಜು ತುಂಬಿ ದುರ್ವಾಸನೆ ಎದ್ದಿದೆ, ನಿತ್ಯ 500 ಜನರಿಗೆ ಊಟ, ಉಪಹಾರ ಪೂರೈಸುತ್ತೇವೆ ಎನ್ನುವ ಕ್ಯಾಂಟಿನ್ ವ್ಯವಸ್ಥೆ ನೋಡಿದರೆ ಜನ ಇಂತಹ ಅವ್ಯವಸ್ಥೆ ತುಂಬಿದ ವಾತಾವರಣದಲ್ಲಿ ಹೇಗಾದ್ರೂ ಆಹಾರ ಸೇವಿಸಬೇಕು ತಿಳಿಯದಾಗಿದೆ.
ಒಟ್ಟಾರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಹಾರ ಇಲಾಖೆ ಅಧಿಕಾರಿಗಳೇ, ಆಹಾರ ನಿರೀಕ್ಷಕರೇ ಇಂದಿರಾ ಕ್ಯಾಂಟಿನ್ ಪರಿಸ್ಥಿತಿ ಬಗ್ಗೆ ಇನ್ನಾದರೂ ಗಮನಿಸಿ ಎನ್ನುತ್ತಾರೆ ಸಾರ್ವಜನಿಕರು.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/04/2026 03:47 pm
LOADING...