ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ - ಧಾರವಾಡ ಸೇರಿ 17 ಹಾಸ್ಟೆಲ್‌ಗಳ ಮೇಲೆ ಲೋಕಾಯುಕ್ತ ದಾಳಿ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಸೇರಿ 17 ಹಾಸ್ಟೆಲ್‌ಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿ, ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಆಲಿಸಿದ್ದಾರೆ.

ಹೌದು,,, ಲೋಕಾಯುಕ್ತ ಎಸ್‌ಪಿ‌ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, ಹುಬ್ಬಳ್ಳಿಯ ಲಿಂಗರಾಜ ನಗರ ತೋಳನಕೇರಿಯಲ್ಲಿನ ಹಾಸ್ಟೆಲ್ ಮೇಲೂ ದಾಳಿ ನಡೆದಿದ್ದು, ಡಿವೈಎಸ್‌ಪಿ ವಿಜಯ ಬಿರಾದರ್ ಬಳಿ ವಿದ್ಯಾರ್ಥಿಗಳು ತಮ್ಮ ಅಳಲನ್ನ ತೋಡಿಕೊಂಡರು. ಸರಿಯಾಗಿ ಊಟ ನೀಡಲ್ಲ, ವಸತಿ ಸೌಲಭ್ಯ ಸರಿ ಇಲ್ಲ ಅನ್ನೋ ಆರೋಪ ಕೇಳಿ ಬಂದಿವೆ. ಹುಬ್ಬಳ್ಳಿ ಧಾರವಾಡ ಅವಳಿನಗರದ 17 ವಸತಿ ನಿಲಯದ ಮೇಲೆ ದಾಳಿ ನಡೆದಿದೆ.

7 ಬಿ ಸಿ ಎಂ, 7 ಸಮಾಜ ಕಲ್ಯಾಣ ಇಲಾಖೆ, 3 ಮೈನಾರಿಟಿ ವಸತಿ ನಿಲಯ ಸೇರಿ ಒಟ್ಟು 17 ತಂಡದಿಂದ ದಾಳಿ ನಡೆದಿದೆ. ದಾವಣಗೆರೆ, ಹಾವೇರಿ, ಗದಗ, ಬೆಳಗಾವಿ ಹಾಗೂ ಧಾರವಾಡ ಅಧಿಕಾರಿಗಳಿಂದ ಹಾಸ್ಟೆಲ್‌ಗಳ ಮೇಲೆ ದಾಳಿ ನಡೆಸಿದ್ದು, ಮೂಲಭೂತ ಸೌಕರ್ಯ ಸಿಗ್ತಿಲ್ಲ ಅಂತ ಲೋಕಾಯುಕ್ತ ಅಧಿಕಾರಿಗಳಿಂದ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು ದಾಳಿ‌ ಮಾಡಿ, ವಿದ್ಯಾರ್ಥಿಗಳ ಕುಂದು ಕೊರತೆ ಆಲಿಸಿ ಮೇಲಾಧಿಕಾರಿಗಳಿಗೆ ವರದಿ ನೀಡಲಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/04/2026 03:45 pm

Cinque Terre

13.43 K

Cinque Terre

0

ಸಂಬಂಧಿತ ಸುದ್ದಿ