ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಟಿಬೆಟಿಯನ್ ಮೂಲದ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ

ಧಾರವಾಡ: ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಬಳಿ ಇರುವ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹಳಿಯಾಳ ಕೆಳ ಸೇತುವೆ ಬಳಿ ಟಿಬೆಟಿಯನ್ ಮೂಲದ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಟಿಬೆಟಿಯನ್ ಮೂಲದ ಥಾಶಿದೊಂಡು (39) ಎಂಬ ವ್ಯಕ್ತಿಯೇ ಸಾವಿಗೀಡಾದವನು ಎಂದು ಗೊತ್ತಾಗಿದೆ. ಈತ ಮುಂಡಗೋಡದಲ್ಲಿ ವಾಸವಾಗಿದ್ದ.

ಈ ಶವ ನೋಡಿದ ಸ್ಥಳೀಯರು ಇದು ಅಪಘಾತ ಇರಬಹುದು ಎಂದು ಧಾರವಾಡ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಆತನ ಮುಖದ ಮೇಲೆ ಗಾಯಗಳಾಗಿದ್ದು ಗೊತ್ತಾಗಿದೆ.

ಇದು ಕೊಲೆಯಾಗಿರಬಹುದು. ಯಾರೋ ಬೇರೆ ಕಡೆ ಕೊಲೆ ಮಾಡಿ ಶವವನ್ನು ಇಲ್ಲಿ ತಂದು ಹಾಕಲಾಗಿದೆ. ಸ್ಥಳಕ್ಕೆ ಥಾಶಿದೊಂಡು ಅವರ ಸಂಬಂಧಿಕರು ಬಂದಿದ್ದು, ಅವರು ಕೂಡ ಮುಂಡಗೋಡದಲ್ಲಿದ್ದರು. ಇದು ಕೊಲೆಯಾಗಿರುವ ಶಂಕೆ ಇದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಎಸ್‌ಪಿ ಗುಂಜನ್ ಆರ್ಯ ಮಾಹಿತಿ ನೀಡಿದ್ದಾರೆ.

Edited By : Abhishek Kamoji
Kshetra Samachara

Kshetra Samachara

29/04/2026 10:44 pm

Cinque Terre

36.13 K

Cinque Terre

0

ಸಂಬಂಧಿತ ಸುದ್ದಿ