ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ರತ್ನ-2026 ಪ್ರಶಸ್ತಿ ಪ್ರದಾನ: ಯಶಸ್ವಿಗೊಂಡ ಮೂರನೇಯ ಬಹುದೊಡ್ಡ ಸಂಭ್ರಮ

ಹುಬ್ಬಳ್ಳಿ: ವಸಂತ ಕಾಲ ಹೂವು ಹಣ್ಣಿನ ಜೊತೆಗೆ ಕೋಗಿಲೆಗೂ ಸಂಭ್ರಮದ ರಸದೌತಣ ನೀಡುವಂತೆ. ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಹುಬ್ಬಳ್ಳಿಯಲ್ಲಿ ಬೆರಳೆಣಿಕೆಯ ಸಿಬ್ಬಂದಿಯಿಂದ ಆರಂಭಗೊಂಡು ರಾಜ್ಯವೇ ಬೆರಗಾಗುವಂತೆ ಮಾಡಿದೆ. ಶ್ರದ್ಧೆಯಿಂದ ಮಾಡುವ ಸುದ್ಧಿಯಷ್ಟೇ ಈಗ ಸಾಧಕರನ್ನು ಯುವ ಪೀಳಿಗೆಗೆ ಸ್ಪೂರ್ತಿಯನ್ನಾಗಿ ಮಾಡುವ ಕಾರ್ಯವನ್ನು ಮಾಡಿದೆ. ಅದೇ THE BIGGEST PUBLICNEXT RATNA AWARD-2026..

ಸೊಶೀಯಲ್ ಮೀಡಿಯಾ ಸಾಕಷ್ಟು ಪ್ರಭಾವಿಯಾಗಿದ್ದರೂ, ಪ್ರಚಾರದಿಂದ ದೂರ ಉಳಿದ ಸಾಧಕರ ಸಾಧನೆಯನ್ನು ಗುರುತಿಸಿ ಹೊರ ಪ್ರಪಂಚಕ್ಕೆ ಪರಿಚಯಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿರುವುದು ನಿಮ್ಮ ಪಬ್ಲಿಕ್ ನೆಕ್ಸ್ಟ್. ಹೌದು.. ದುಡಿಮೆಯ ನಂಬಿ ಬದುಕು ಅದರಲ್ಲಿ ದೇವರ ಹುಡುಕು ಎಂಬುವಂತ ಸಾಧಕರು ಒಂದೆಡೆಯಾದರೇ, ಸರ್ಕಾರಿ ಕೆಲಸ ದೇವರ ಕೆಲಸ ಎಂದುಕೊಂಡ ಸಾಧಕರು ಮತ್ತೊಂದು ಕಡೆಯಲ್ಲಿ. ಶಿಕ್ಷಣ ಸೇವೆಯೇ ನಮ್ಮ ಬಾಳಿಗೆ ದೇವರು ಕೊಟ್ಟ ಜವಾಬ್ದಾರಿ ಎಂಬುವಂತ ಶಿಕ್ಷಣ ಸೇವೆಯ ಸಾಧಕರು. ಹೀಗೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಜೊತೆಗೆ ಬಹುದೊಡ್ಡ ಸಾಮಾಜಿಕ ಜವಾಬ್ದಾರಿ ನಿಭಾಯಿಸಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಪಬ್ಲಿಕ್ ನೆಕ್ಸ್ಟ್ ಆಡಳಿತ ಮಂಡಳಿ ಅತಿ ವಿಜೃಂಭಣೆಯಿಂದ ಸ್ವಾಗತಿಸದರು.

ಹುಬ್ಬಳ್ಳಿಯ ನವೀನ್ ಹೊಟೇಲ್ ನ‌ ಭವ್ಯ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್, ಪಬ್ಲಿಕ್ ನೆಕ್ಸ್ಟ್ ನ ರಾಘವೇಂದ್ರ ರಾವ್, ಮಂಜುನಾಥ ರಾವ್ ವಿದ್ಯುಕ್ತವಾಗಿ ಚಾಲನೆ ನೀಡಿದರು. ಇಂತಹದೊಂದು ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಬಹುದೊಡ್ಡ ಸಹಕಾರ ನೀಡಿದ್ದು,‌ ಹುಬ್ಬಳ್ಳಿಯ ಪ್ರತಿಷ್ಠಿತ ಶ್ರೀ ರಾಜೇಶ್ವರಿ ಪ್ರಾಪರ್ಟಿಸ್. ಮಹತ್ವದ ಕಾರ್ಯಕ್ರಮದಲ್ಲಿ ಸುಮಾರು 22 ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುವ ಜೊತೆಗೆ ಸಾಧಕರ ಸಾಧನೆಯ ಸಾಕ್ಷ್ಯಚಿತ್ರವನ್ನು ಪಬ್ಲಿಕ್ ನೆಕ್ಸ್ಟ್ ಅನಾವರಣ ಮಾಡಿದೆ. ಇಂತಹ ಕಾರ್ಯಕ್ರಮದ ಬಗ್ಗೆ ಹಾಗೂ ಪಬ್ಲಿಕ್ ನೆಕ್ಸ್ಟ್ ಕಾರ್ಯವೈಖರಿಯ ಬಗ್ಗೆ ಕೇಂದ್ರ ಸಚಿವರು ಅಭಿನಂದನೆ ಸಲ್ಲಿಸಿದರು.

ಒಟ್ಟಿನಲ್ಲಿ ಪ್ರತಿಯೊಂದು ಗಲ್ಲಿಗಲ್ಲಿ ಓಡಾಡಿ, ಹಳ್ಳಿ ಹಳ್ಳಿ ಸುತ್ತಾಡಿ ಸುದ್ದಿ ಮಾಡಿ ಜನರಿಗೆ ನ್ಯಾಯ ಕೊಡಿಸುವ ಜೊತೆಗೆ ಪಬ್ಲಿಕ್ ನೆಕ್ಸ್ಟ್ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡಿರುವ ಸಾಧಕರನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸುವ ಕಾರ್ಯವನ್ನು ಮಾಡಿದೆ. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದೇ ನೆರೆದಿದ್ದ ಜನಸಂದಣಿ ಹಾಗೂ ಸಂಭ್ರಮದ‌ ಯಶಸ್ವಿ. ಪಬ್ಲಿಕ್ ನೆಕ್ಸ್ಟ್ ಯಶಸ್ವಿ ಹಾದಿಯನ್ನು ಪರಿಚಯಿಸಿದ್ದಾರೆ ಸಿಇಒ ಮಂಜುನಾಥ ರಾವ್.

ಇನ್ನೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 22 ಜನ ಸಾಧಕರನ್ನು ಭವ್ಯವೇದಿಕೆಯಲ್ಲಿ ಸಮಾಗಮ ಮಾಡುವ ಜೊತೆಗೆ ಆತ್ಮೀಯವಾಗಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಒಂದೆಡೆಯಾದರೇ, ಕುಟುಂಬ ಸಮ್ಮಿಲನದ ರೀತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದ್ದು, ಇಂತಹ ಕಾರ್ಯದ ಬಗ್ಗೆ ಶಾಸಕರು ಹಾಗೂ ಅತಿಥಿಗಳು ಶುಭ ಹಾರೈಸಿದರು.

ವಿದ್ಯಾರತ್ನ, ಉದ್ಯಮ ರತ್ನ, ಸೇವಾರತ್ನ,‌‌ ಸಹಕಾರ ರತ್ನ ಹೀಗೆ ವಿವಿಧ ಕ್ಷೇತ್ರದಲ್ಲಿನ ಸಾಧಕರನ್ನು ಶೋಧಿಸಿ 22 ಜನ ಸಾಧಕರಿಗೆ ಒಂದೇ ವೇದಿಕೆಯಲ್ಲಿ ಗೌರವ ಸಮರ್ಪಣೆ ಮಾಡಲಾಯಿತು. ಕಾರ್ಯಕ್ರಮ ಯಶಸ್ಸಿಗೆ ಹಾಗೂ ಪಬ್ಲಿಕ್ ನೆಕ್ಸ್ಟ್ ಬೆಳವಣಿಗೆಗೆ ಸಾಕ್ಷಿಯಾದ ಗಣ್ಯಾತಿ ಗಣ್ಯರಿಗೆ ಪಬ್ಲಿಕ್ ನೆಕ್ಸ್ಟ್ ಸಿಒಒ ರಾಘವೇಂದ್ರ ರಾವ್ ಅಭಿನಂದನೆ ಸಲ್ಲಿಸಿದರು.

ಒಟ್ಟಿನಲ್ಲಿ ಪ್ರಶಸ್ತಿ ಪ್ರದಾನದ ಜೊತೆಗೆ ಪಬ್ಲಿಕ್ ನೆಕ್ಸ್ಟ್ ಆಹ್ವಾನಿತರಿಗೆ ಔತಣಕೂಟ ಏರ್ಪಡಿಸಿದ್ದು, ಎಲ್ಲರೂ ಕೂಡ ಪಬ್ಲಿಕ್ ನೆಕ್ಸ್ಟ್ ನ ಅತಿಥಿ ಸತ್ಕಾರವನ್ನು ಸ್ವೀಕರಿಸಿ ಪಬ್ಲಿಕ್ ನೆಕ್ಸ್ಟ್ ಕಾರ್ಯಕ್ಕೆ ಶುಭ ಹಾರೈಸಿದ್ದಾರೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/04/2026 07:13 pm

Cinque Terre

93.9 K

Cinque Terre

0

ಸಂಬಂಧಿತ ಸುದ್ದಿ