ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀ ರಾಜೇಶ್ವರಿ ಪ್ರಾಪರ್ಟಿಸ್ ಸಹಕಾರಕ್ಕೆ ಪಬ್ಲಿಕ್ ನೆಕ್ಸ್ಟ್ ಅಭಿನಂದನೆ, ರತ್ನ ಪ್ರಶಸ್ತಿಗೆ ಸಹಭಾಗಿತ್ವ ನೀಡಿದ್ದ ಸಂಸ್ಥೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೇ ರಿಯಲ್ ಎಸ್ಟೇಟ್ ಉದ್ಯಮದಲ್ಲಿಯೇ ಸಾಕಷ್ಟು ಸಾಧನೆ ಮಾಡಿ, ಜನರ ವಿಶ್ವಾಸ ಗಳಿಸಿರುವ ಸಂಸ್ಥೆ ಶ್ರೀರಾಜೇಶ್ವರಿ ಪ್ರಾಪರ್ಟಿಸ್. ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ವತಿಯಿಂದ ಆಯೋಜಿಸಲಾಗಿದ್ದ ಪಬ್ಲಿಕ್ ನೆಕ್ಸ್ಟ್ ರತ್ನ ಪ್ರಶಸ್ತಿ-2026 ಸಂಭ್ರಮಕ್ಕೆ ಬಹುದೊಡ್ಡ ಸಹಭಾಗಿತ್ವ ನೀಡಿದ್ದ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಪಬ್ಲಿಕ್ ನೆಕ್ಸ್ಟ್ ಆಡಳಿತ ಮಂಡಳಿ ಗೌರವ ಸಮರ್ಪಣೆ ಮಾಡಿದೆ.

ಶ್ರೀರಾಜೇಶ್ವರಿ ಪ್ರಾಪರ್ಟಿಸ್ ವ್ಯವಸ್ಥಾಪಕ ನಿರ್ದೇಶಕರಾದ ವಿವೇಕಾನಂದ ಮೊಕಾಶಿ ಹಾಗೂ ರಾಕೇಶ ಬಳ್ಳಾರಿ ಅವರಿಗೆ ಪಬ್ಲಿಕ್ ನೆಕ್ಸ್ಟ್ ಸಿಇಒ ಮಂಜುನಾಥ ರಾವ್ ಹಾಗೂ ಸಿಒಒ ರಾಘವೇಂದ್ರ ರಾವ್ ಅವರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಹೌದು... ಮೊನ್ನೆಯಷ್ಟೇ ಹುಬ್ಬಳ್ಳಿಯ ನವೀನ್ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಪಬ್ಲಿಕ್ ನೆಕ್ಸ್ಟ್ ರತ್ನ ಪ್ರಶಸ್ತಿ-2026 ಸಂಭ್ರಮದಲ್ಲಿ 22 ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಇಂತಹದೊಂದು ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಬಹುದೊಡ್ಡ ಸಹಭಾಗಿತ್ವ ನೀಡಿರುವ ಶ್ರೀ ರಾಜೇಶ್ವರಿ ಪ್ರಾಪರ್ಟಿಸ್ ಗೆ ಗೌರವ ಸಮರ್ಪಣೆ ಮಾಡಲಾಯಿತು.

ಇನ್ನೂ ಪಬ್ಲಿಕ್ ನೆಕ್ಸ್ಟ್ ನ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಸಹಕಾರ ನೀಡುವ ಶ್ರೀರಾಜೇಶ್ವರಿ ಪ್ರಾಪರ್ಟಿಸ್ ಕಾರ್ಯ ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ಪಬ್ಲಿಕ್ ನೆಕ್ಸ್ಟ್ ವತಿಯಿಂದ ಶುಭ ಹಾರೈಸಿಲಾಯಿತು.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/04/2026 07:53 pm

Cinque Terre

15.34 K

Cinque Terre

1

ಸಂಬಂಧಿತ ಸುದ್ದಿ