ಹುಬ್ಬಳ್ಳಿ: ಆಹಾರಂ ಅಂದ್ರೆ ಒಂದು ಸಾಂಪ್ರದಾಯಿಕ ಶೈಲಿಯ ಊಟ ಜೊತೆಗೆ ಒಳ್ಳೆಯ ರುಚಿ ಶುಚಿ ಇರುವ ಏಕೈಕ ಜಾಗ ಅನ್ನುವುದು ಗೊತ್ತು.
ಪ್ರತಿವರ್ಷದಂತೆ ಈ ಬೇಸಿಗೆಯ ಸೀಸನ್‌ಗೆ ಮಾವಿನಹಣ್ಣಿನ ವಿಶೇಷ ಊಟವನ್ನು ಸವಿಯಲು ಹುಬ್ಬಳ್ಳಿಯ ಆಹಾರ ಪ್ರಿಯರಿಗೆ ಮತ್ತೆ ರುಚಿ ಸವಿಯುವ ಸುವರ್ಣಾವಕಾಶ. ದೇಶಪಾಂಡೆ ನಗರದ “ಆಹಾರಂ” ಹೋಟೆಲ್‌ನಲ್ಲಿ ಏಪ್ರಿಲ್ 28ರಿಂದ ಮೇ 10, 2026ರವರೆಗೆ “ಮ್ಯಾಂಗೋ ಸ್ಪೆಷಲ್ ಎಲೆ ಊಟ”ವನ್ನು ಶುರುಮಾಡಲಾಗಿದೆ.
ಬಾಳೆ ಎಲೆಯ ಮೇಲೆ ಸರ್ವ್ ಮಾಡಲಾಗುವ ಈ ವಿಶೇಷ ಊಟದಲ್ಲಿ 20ಕ್ಕೂ ಹೆಚ್ಚು ಐಟಂಗಳು ಇದ್ದು, ಬಹುತೇಕ ಎಲ್ಲ ಪದಾರ್ಥಗಳಲ್ಲೂ ಮಾವಿನಹಣ್ಣಿನ ಸುವಾಸನೆ ಮತ್ತು ರುಚಿ ಮಿಶ್ರಣವಾಗಿದೆ. ಆಮ್ ಪನ್ನ, ರಾ ಮ್ಯಾಂಗೋ ಚಟ್ನಿ, ಮ್ಯಾಂಗೋ ಪಿಕಲ್, ಮ್ಯಾಂಗೋ ಚಿತ್ರಾನ್ನ, ಮ್ಯಾಂಗೋ ತಂಬಳಿ, ಮ್ಯಾಂಗೋ ಭರ್ತಾ ಸೇರಿದಂತೆ ವಿಭಿನ್ನ ವಿಧದ ಪದಾರ್ಥಗಳು ಗ್ರಾಹಕರಿಗೆ ಲಭ್ಯ.
ಇದಲ್ಲದೆ, ಮ್ಯಾಂಗೋ ಕೊಸಂಬರಿ, ಸಾಂಬಾರ್, ರಸಂ, ಪಲ್ಯ, ಕುರ್ಮಾ, ಪಾಪಡ್ ಸೇರಿದಂತೆ ಪರಂಪರೆಯ ಐಟಂಗಳು ಊಟದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಸಿಹಿ ಪ್ರಿಯರಿಗಾಗಿ ಮ್ಯಾಂಗೋ ಹೋಳಿಗೆ, ಮ್ಯಾಂಗೋ ಶೀಕರಣಿ, ಮ್ಯಾಂಗೋ ಬರ್ಫಿ, ಮ್ಯಾಂಗೋ ಶೀರಾ ಹಾಗೂ ಮ್ಯಾಂಗೋ ಐಸ್ ಕ್ರೀಂ ಕೂಡ ಇದಾವೇ...
ಕಳೆದ ವರ್ಷ ಈ ವಿಶೇಷ ಊಟವನ್ನು ಮಿಸ್ ಮಾಡಿದವರು ಈ ಬಾರಿ ತಪ್ಪದೇ ಅನುಭವಿಸಬೇಕೆಂದು ಗ್ರಾಹಕರು ಹೇಳುತ್ತಿದ್ದಾರೆ.
ಮಾವಿನಹಣ್ಣಿನ ಸೀಸನ್‌ನಲ್ಲಿ ಹೊಸ ರುಚಿಗಳ ಸಂಭ್ರಮವನ್ನು ಅನುಭವಿಸಲು ಆಹಾರ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ನೀವು ಬನ್ನಿ ಮತ್ತೆ.... ಇದು ಕೇವಲ ಮೇ 10ರವರೆಗೆ ಮಾತ್ರ..
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/04/2026 09:39 pm
LOADING...