ಹುಬ್ಬಳ್ಳಿ: ಹುಬ್ಬಳ್ಳಿಯ IBMR ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ರೂಪಿಸಿಕೊಳ್ಳುವಂತ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. IBMR ಕಾಲೇಜಿನಲ್ಲಿ ಸೈನರ್ಜಿ ಇಂಟರ್ ಕಾಲೇಜ್ ಫೆಸ್ಟ್ ಹಮ್ಮಿಕೊಂಡಿದ್ದು, ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.
ಈ ಸೈನರ್ಜಿ ಇಂಟರ್ ಕಾಲೇಜ್ ಫೆಸ್ಟ್‌ನಲ್ಲಿ ಹುಬ್ಬಳ್ಳಿ ಧಾರವಾಡದ 12 ಕಾಲೇಜಿನ UG ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಆ್ಯಡ್ ವಾರ್, ಕಲ್ಚರಲ್ ನೆಕ್ಸಾಸ್, ಕ್ವಿಜ್, ಬೆಸ್ಟ್ ಮ್ಯಾನೇಜರ್, ರೀಯಲ್ ಟು ರೀಲ್ ಹೀಗೆ ಹಲವಾರು ಕಾಂಪಿಟೇಶನ್ ನೀಡಿದ್ದರು. ಈ ಫೆಸ್ಟ್‌ನಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಶಸ್ತಿ ಕೂಡ ನೀಡಿದರು. ಇಡೀ ಕಾಲೇಜು ಸಂಸ್ಥೆ ಒಂದೊಳ್ಳೆ ಅದ್ಭುತವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಸೈನರ್ಜಿ ಇಂಟರ್ ಕಾಲೇಜ್ ಫೆಸ್ಟ್ ಕಾರ್ಯಕ್ರಮವನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪ್ರೊ. ಶ್ಯಾಮ್‌ಕುಮಾರ್ ಅವರು ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮವನ್ನು ಉದ್ದೇಶಿತ ಹಿತನುಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/04/2026 08:08 pm
LOADING...