ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಅಪ್ರಾಪ್ತರ ಅಪಾಯಕಾರಿ ಬೈಕ್ ಸವಾರಿ - ಪಾಲಕರಿಗೆ ಜವಾಬ್ದಾರಿ ಇಲ್ವಾ?

ಧಾರವಾಡ: ಸಂಚಾರಿ ನಿಯಮಗಳ ಉಲ್ಲಂಘನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪೊಲೀಸರು ಎಷ್ಟೇ ಕಠಿಣ ಕಾನೂನು ಕ್ರಮ ಕೈಗೊಂಡರೂ, ನಿಯಮ ಪಾಲಿಸದವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇದೀಗ ಧಾರವಾಡದಲ್ಲಿ ನಡೆದ ಘಟನೆಯೊಂದು ಈ ಮಾತಿಗೆ ಪುಷ್ಟಿ ನೀಡಿದೆ.

ಒಂದೇ ಬೈಕ್‌ನಲ್ಲಿ ನಾಲ್ವರು ಅಪ್ರಾಪ್ತ ಬಾಲಕರ ಅಪಾಯಕಾರಿ ಸವಾರಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯದಲ್ಲಿ, ವಯಸ್ಸಿಗೆ ಬಾರದ ನಾಲ್ವರು ಬಾಲಕರು ಯಾವುದೇ ಭಯವಿಲ್ಲದೆ, ಹೆಲ್ಮೆಟ್ ರಹಿತವಾಗಿ ಬೈಕ್ ಓಡಿಸುತ್ತಿರುವುದು ಕಂಡುಬಂದಿದೆ.

ಪ್ರತಿನಿತ್ಯ ಅಪ್ರಾಪ್ತ ವಯಸ್ಸಿನವರು ಬೈಕ್ ಸವಾರಿ ಮಾಡುವುದು ಸಾಮಾನ್ಯವಾಗಿದೆ. ಇದಕ್ಕೆ ಪೋಷಕರ ನಿರ್ಲಕ್ಷ್ಯವೇ ಮುಖ್ಯ ಕಾರಣ. ಮಕ್ಕಳ ಕೈಗೆ ಬೈಕ್ ಕೊಟ್ಟು, ಅವರ ಜೀವಕ್ಕೆ ಅಪಾಯ ತಂದೊಡ್ಡುವ ಜವಾಬ್ದಾರಿಯನ್ನು ಪೋಷಕರು ಮರೆಯುತ್ತಿದ್ದಾರೆ. ಈ ಕುರಿತು ಪೊಲೀಸರು ಹಾಗೂ ಪೋಷಕರು ಗಂಭೀರವಾಗಿ ಎಚ್ಚೆತ್ತುಕೊಳ್ಳಬೇಕಿದೆ. ಧಾರವಾಡ ನಗರದಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಂಬಂಧ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/04/2026 04:14 pm

Cinque Terre

28.59 K

Cinque Terre

0

ಸಂಬಂಧಿತ ಸುದ್ದಿ