ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹತ್ಯೆಯಾದ ಶ್ರೀಶೈಲ್‌ ಚಿಕ್ಕೇರಿ ಸಾವಿಗೆ ನ್ಯಾಯ ದೊರಕಿಸಲು ಶ್ರೀಶೈಲ್‌ ತಂದೆ ಮಲ್ಲೇಶಪ್ಪ ಚಿಕ್ಕೇರಿ ಆಗ್ರಹ

ಧಾರವಾಡ : ತನ್ನ ಸ್ನೇಹಿತರಿಂದಲೇ ಹತ್ಯೆಯಾದ ಶ್ರೀಶೈಲ್‌ ಚಿಕ್ಕೇರಿ ಅವರ ಸಾವಿಗೆ ನ್ಯಾಯ ದೊರಕಿಸಲು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಶ್ರೀಶೈಲ್‌ ತಂದೆ ಮಲ್ಲೇಶಪ್ಪ ಚಿಕ್ಕೇರಿ ಆಗ್ರಹಿಸಿದರು.ಧಾರವಾಡ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಡಿಎಂನಲ್ಲಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೊನೆ ವರ್ಷದಲ್ಲಿ ಓದುತ್ತಿದ್ದ ಶ್ರೀಶೈಲ್‌ 2005ರಲ್ಲಿ ಕುಂದಾಪುರದಲ್ಲಿ ತನ್ನ ಸ್ನೇಹಿತರ ಜೊತೆಗೂಡಿ ಹೋದಾಗ ಹತ್ಯೆಯಾಗಿದ್ದಾನೆ.

ಸ್ನೇಹಿತನ ಸಹೋದರಿ ಮದುವೆಗೆಂದು ಸ್ನೇಹಿತರು ಆತನನ್ನು ಕರೆದೊಯ್ದಿದ್ದರು. ಆದರೆ, ಈ ಹತ್ಯೆಯನ್ನು ಪೊಲೀಸರು ಆತ್ಮಹತ್ಯೆ ಎಂದು ಬಿಂಬಿಸಿ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ ಎಂದು ಮಲ್ಲೇಶಪ್ಪ ಆರೋಪಿಸಿದರು.

ತೀವ್ರ ಒತ್ತಡ ತಂದ ಹಿನ್ನೆಲೆಯಲ್ಲಿ 2006ರಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ಸಹ ಸರಿಯಾಗಿ ತನಿಖೆ ಮಾಡಲಿಲ್ಲ. ತಪ್ಪಿತಸ್ಥರ ಮೇಲೆ ಯಾವುದೇ ಕ್ರಮವಾಗಿಲ್ಲ. ಮಗ ಸಾವಿಗೆ ಈವರೆಗೂ ಕಾರಣವೂ ಸ್ಪಷ್ಟವಾಗಿಲ್ಲ. ಈಗಲೂ ಕಾಲ ಮಿಂಚಿಲ್ಲ. ಆತನೊಂದಿಗೆ ಕುಂದಾಪುರಕ್ಕೆ ತೆರಳಿದ ಸ್ನೇಹಿತರನ್ನು ಸರಿಯಾಗಿ ವಿಚಾರಣೆ ಮಾಡಿ ಘಟನೆ ಬಗ್ಗೆ ಸಿಬಿಐ ತನಿಖೆ ಮಾಡಬೇಕೆಂದು ಆಗ್ರಹಿಸಿದರು.

Edited By : Vinayak Patil
Kshetra Samachara

Kshetra Samachara

30/04/2026 09:55 pm

Cinque Terre

4.41 K

Cinque Terre

0

ಸಂಬಂಧಿತ ಸುದ್ದಿ