ಕುಂದಗೋಳ : ಸವಾಯಿ ಗಂಧರ್ವ ಸ್ಮಾರಕ ಭವನ ಕುಂದಗೋಳ ಪಟ್ಟಣದಲ್ಲಿ ಮಂಗಳವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಒಟ್ಟು 151 ಅಹವಾಲು ಸ್ವೀಕಾರಗೊಂಡವು.
ಅಹವಾಲು ಕೊಡಲು ಸರದಿ ಸಾಲಿನಲ್ಲಿ ನಿಂತಿದ್ದ ಕೆಲವರು ಅಹವಾಲನ್ನು ಸಚಿವ ಸಂತೋಷ್ ಲಾಡ್ ಅವರಿಗೆ ನೀಡಲಾಗದೆ ಪರದಾಡಿದ ಪ್ರಸಂಗ ಸಹ ನಡೆಯಿತು, ಇದಲ್ಲದೆ ಅಹವಾಲು ಕೊಟ್ಟವರೂ ತಮ್ಮ ಸಮಸ್ಯೆ ಇತ್ಯರ್ಥ ಆಗುತ್ತಾ ? ಇಲ್ಲವೋ ಎಂಬ ಗೊಂದಲದಲ್ಲಿ ಇದ್ದ ಮಾತುಗಳು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಕೇಳಿ ಬಂದವು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಬಹುತೇಕ ಗ್ರಾಮೀಣ ಭಾಗದಿಂದ ಆಗಮಿಸಿದ ಅನಕ್ಷರಸ್ಥರಿಗೆ ಸಚಿವರಿಗೆ ಅರ್ಜಿ ಬರೆದು ಕೊಡುವುದು ಸವಾಲಿನ ಕೆಲಸವಾಯಿತು. ಕೆಲವರು ಅರ್ಜಿ ಬರೆಯಲಾಗದೆ ಮನೆಗೆ ಹೋದರೆ ಬೇರೆಯವರ ಸಹಾಯದಿಂದ ಕೆಲವರು ಅರ್ಜಿ ಬರೆದು ಕೊಟ್ಟರು.
ಒಟ್ಟಾರೆ ಜನತಾ ದರ್ಶನ ಕಾರ್ಯಕ್ರಮದಲ್ಲಿ 151 ಅರ್ಜಿ ಸಲ್ಲಿಕೆಯಾದರೇ, ಕಂದಾಯ ಇಲಾಖೆ 48 ಪ್ರಕರಣ, ಆರ್.ಡಿ.ಪಿ.ಆರ್ 33 ಪ್ರಕರಣ, ನಗರಾಭಿವೃದ್ಧಿ ಇಲಾಖೆ 12 ಪ್ರಕರಣ, ಶಿಕ್ಷಣ ಇಲಾಖೆ 10 ಪ್ರಕರಣ, ಇಂಧನ ಇಲಾಖೆ 6 ಪ್ರಕರಣ ದಾಖಲಾದವು.
ಶ್ರೀಧರ್ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
30/04/2026 08:53 am
LOADING...