ಶಿರಹಟ್ಟಿ: ತಾಲೂಕಿನ ವರವಿ ಗ್ರಾಮದ ದ್ಯಾಮವ್ವ ದೇವಿ ಜಾತ್ರಾಮಹೋತ್ಸವವು ಇದೆ ತಿಂಗಳು 21 ಮತ್ತು 22 ರಂದು ವಿಜೃಂಭಣೆಯಿಂದ ನಡೆಯಲಿದೆ. 21/04/2026 ನೇ ಮಂಗಳವಾರ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಗ್ರಾಮ ದೇವಿಗೆ ಪ್ರಾಣ ಪ್ರತಿಷ್ಠಾಪನೆ, ಧಾರ್ಮಿಕ ವಿಧಿ ವಿಧಾನಗಳು, ನಂತರ ಪ್ರಸಾದ ವ್ಯವಸ್ಥೆ ಇರುವುದು.
ತದನಂತರ ಸಾಯಂಕಾಲ ವಾದ್ಯ ಮೇಳಗಳೊಂದಿಗೆ,ಹಾಗೂ ಮದ್ದು ಹಾರೈಸುತ್ತಾ, ಗ್ರಾಮದ ಬೀದಿಗಳಲ್ಲಿ ದೇವಿಯ ಮೆರವಣಿಗೆ ನಡೆದು ಬೆಳಗಿನ ಜಾವ ಚೌತಮ್ಮನ ಕಟ್ಟೆಗೆ ದೇವಿಯು ಆಗಮಿಸುತ್ತಾಳೆ.22/04/2026 ಬುಧವಾರದಂದು ಗ್ರಾಮ ದೇವಿಗೆ ಉಡಿ ತುಂಬುವುದು ಹೀಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಇರುತ್ತವೆ, ಆದ್ದರಿಂದ ಸಕಲ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
18/04/2026 10:48 am
LOADING...