ನರಗುಂದ: ತಾಲೂಕಿನ ಬೆನಕನಕೊಪ್ಪ ಗ್ರಾಮದಲ್ಲಿ ಗ್ರಾಮದ ಗ್ರಾಮದೇವತೆ ದ್ಯಾಮಮ್ಮ ದುರ್ಗಾದೇವಿ ದೇವಿಯ ಜಾತ್ರೆ ಸಂಭ್ರಮ ಜೋರಾಗಿದೆ. 18 ವರ್ಷಗಳ ನಂತರ ಶಕ್ತಿ ದೇವತೆಯ ಜಾತ್ರೆಯನ್ನ ಐದು ದಿನಗಳ ಕಾಲ ನಡೆಸಲಾಗುತ್ತಿದೆ.
ಗ್ರಾಮದಲ್ಲಿ ಅದ್ದೂರಿಯಾಗಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ವಾದ್ಯಗಳು, ಕುಂಭಮೇಳ ದೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು.. ಗ್ರಾಮ ದೇವತೆಯ ಜಾತ್ರೆ ಐವತ್ತು ಕ್ವಿಂಟಾಲ್ ಭಂಡಾರ ತರಿಸಲಾಗಿದೆ. ಮೆರವಣಿಗೆ ಉದ್ದಕ್ಕೂ ಭಂಡಾರ ಎರಚುವ ಮೂಲಕ ಯುವಕರು ಮಹಿಳೆಯರು ಭಂಡಾರ ಜಾತ್ರೆಯನ್ನ ಆಚರಣೆ ಮಾಡಿದರು.
ಇನ್ನು ಯುವಕರು ಮಾತ್ರ ತುಂಬಾನೇ ಡಿಫರೆಂಟ್ ಆಗಿ ಡಿಜೆ ಸೌಂಡ್ ಗೆ ಭಂಡಾರ ಎರಚುವ ಮೂಲಕ ಭರ್ಜರಿ ಸ್ಟೆಪ್ ಹಾಕಿದರು. ಬೆನಕನಕೊಪ್ಪದಲ್ಲಿ ಗ್ರಾಮ ದೇವತೆ ಜಾತ್ರೆ ಇರುವ ಕಾರಣ ಹೆಣ್ಣು ಮಕ್ಕಳು ತವರು ಮನೆ ಬರುತ್ತಾರೆ. ಅವರು ಯಾವುದೇ ಊರಿನಲ್ಲಿದ್ದರೂ ಈ ಜಾತ್ರೆಗೆ ಹಾಜರಾಗುತ್ತಾರೆ.
ಹೆಣ್ಣು ಮಕ್ಕಳು ಗ್ರಾಮ ದೇವತೆಗೆ ಪೂಜೆ ಸಲ್ಲಿಸಿ ಉಡಿ ತುಂಬುತ್ತಾರೆ. ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ದೇವತೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡುತ್ತಾರೆ. ಮಳೆ ಚೆನ್ನಾಗಿ ಆಗಲಿ ಬೆಳೆಗಳು ಸಮೃದ್ಧವಾಗಿ ಬರಲೆಂದು ಪ್ರಾರ್ಥನೆ ಮಾಡುತ್ತಾರೆ. ಗ್ರಾಮದ ಯಾವುದೇ ಮನೆಯಲ್ಲಿ ಅಡುಗೆ ಮಾಡುವಂತಿಲ್ಲ.. ಹೀಗಾಗಿ ಭಕ್ತರಿಗಾಗಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಮುಂಜಾನೆ ಉಪಹಾರದ ವ್ಯವಸ್ಥೆ, ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಮಾಡಿಸಲಾಗಿದೆ. ಹೀಗಾಗಿ ಗ್ರಾಮದಲ್ಲಿ ಮಡಿ ಉಡಿಯ ಸಲುವಾಗಿ ಜಾತ್ರಾ ಕಮಿಟಿ ಕಟ್ಟು ನಿಟ್ಟಿನ ನಿಯಮ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಹೀಗಾಗಿ ಭಕ್ತರು ಜಾತ್ರೆಗೆ ಬಂದು ಸಡಗರ ಸಂಭ್ರಮದಿಂದ ಜಾತ್ರೆಯನ್ನ ಖುಷಿ ಖುಷಿಯಿಂದ ಆಚರಣೆ ಮಾಡುತ್ತಿದ್ದಾರೆ. ಗ್ರಾಮದ ಶಕ್ತಿ ದೇವತೆ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಭಂಡಾರ ಜಾತ್ರೆ ಐದು ದಿನಗಳ ಅದ್ದೂರಿಯಾಗಿ ನಡೆಯುತ್ತಿದೆ. ಭಕ್ತರು ಶಕ್ತಿ ದೇವತೆ ಜಾತ್ರೆಯನ್ನ ಫುಲ್ ಎಂಜಾಯ್ ಮಾಡುತ್ತಿದ್ದಾರೆ.
PublicNext
05/05/2026 08:41 pm
LOADING...