ಶಿರಹಟ್ಟಿ: ದ್ವೇಷ ಬೀಡು ಪ್ರೀತಿ ಮಾಡು ಎಂಬ ಸಂದೇಶವನ್ನು ನಾಡಿನಾದ್ಯಂತ ಸಾರಿದ ಜಗದ್ಗುರು ಶ್ರೀ ಫಕೀರೇಶ್ವರ ಮಠದ ರಥೋತ್ಸವವು ಅಪಾರ ಭಕ್ತ ಸಮೂಹದ ನಡುವೆ ಇಂದು ಬಹಳ ವಿಜೃಂಭಣೆಯಿಂದ ನಡೆಯಿತು.
ಪ್ರತಿವರ್ಷದಂತೆ ನಡೆಯುವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಈ ಬಾರಿಯೂ ಕೂಡಾ ಉಭಯ ಶ್ರೀಗಳು ರಥದ ಚಕ್ರಕ್ಕೆ ತೆಂಗಿನ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು, ಜಾತ್ರೆಯಲ್ಲಿ ವಾದ್ಯ ಮೇಳಗಳು ಜಾತ್ರೆಗೆ ಆಗಮಿಸಿದ ಭಕ್ತಾದಿಗಳ ಗಮನಸೆಳೆದವು.
ಜಾತ್ರೆಯಲ್ಲಿ ಡಿವೈಎಸ್‌ಪಿ, ಮೊರ್ತೆಜ ಖಾದ್ರಿ ಅವರ ನೇತೃತ್ವದಲ್ಲಿ ಇನ್ನೂ ಅನೇಕ ಪೊಲೀಸ್ ಸಿಬ್ಬಂದಿ ವರ್ಗವು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ವರದಿ: ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಶಿರಹಟ್ಟಿ
PublicNext
02/05/2026 09:48 am
LOADING...