ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರ ಕನ್ನಡ: ಉಲ್ಲಾಳ ಗ್ರಾಮದಲ್ಲಿ ಕೆರೆ ಬೇಟೆ ಸಂಭ್ರಮ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಲ್ಲಾಳ ಗ್ರಾಮದಲ್ಲಿ ಕೆರೆ ಬೇಟೆ ಸಂಭ್ರಮ ನಡೆಯಿತು.‌ಶ್ರೀ ಮಾರಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಈ ಕೆರೆ ಬೇಟೆ ಯನ್ನು ಆಯೋಜಿಸಲಾಗಿದ್ದು ಮೀನು ಹಿಡಿಯುವ ಕುಣಿಯೊಂದಕ್ಕೆ 500 ರೂಪಾಯಿ ನಿಗದಿ ಪಡಿಸಲಾಗಿತ್ತು.‌ ಉಲ್ಲಾಳ ಕೆರೆಯಲ್ಲಿ ಫಾರಂ ಮೀನು, ಕಟ್ಲಾ ಮೀನು, ಗ್ರಾಸ್ಕರ್ ಮೀನು ಮುಂತಾದ ಮೀನು ಮರಿಗಳನ್ನು ಬಿಟ್ಟು ಸಂರಕ್ಷಣೆ ಮಾಡಿ ಬೆಳೆಸಲಾಗಿತ್ತು.

ಊರಿನ ಗ್ರಾಮಸ್ಥರು ಆಯೋಜಿಸಿದ್ದ ಕೆರೆ ಬೇಟೆ ಶಾಂತಯುತವಾಗಿ ನಡೆಯಿತು. ದೂರದ ಊರುಗಳಿಂದ ಸುಮಾರು 160 ಕ್ಕೂ ಹೆಚ್ಚಿನ ಕುಣಿದಾರರು ಪಾಲ್ಗೊಂಡಿದ್ದರು. ಕುಣಿದಾರರು ಬಿದಿರಿನ ಹಾಗೂ ಕಬ್ಬಿಣದ ತಂತಿಯಿಂದ ಮಾಡಿದ ಕುಣಿ ಸಮೇತ ತುಂಬಾ ಉತ್ಸಾಹದಿಂದ ಕೆರೆ ಬೇಟೆ ಸಂಭ್ರಮದಲ್ಲಿ ಭಾಗವಹಿಸಿದರು.

ಮೀನುಗಳನ್ನು ಹಿಡಿದು ಸಂಭ್ರಮಿಸಿದರು. ಕೆಲವರಿಗೆ ಅತಿ ಹೆಚ್ಚಿನ ಮೀನುಗಳು ಸಿಕ್ಕರೆ ಕೆಲವು ಕುಣಿದಾರರಿಗೆ ಕಡಿಮೆ ಮೀನು ಸಿಕ್ಕಿರುವುದು ಕಂಡು ಬಂತು.

Edited By : Vinayak Patil
PublicNext

PublicNext

18/04/2026 08:50 pm

Cinque Terre

26.55 K

Cinque Terre

0

ಸಂಬಂಧಿತ ಸುದ್ದಿ