ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಕಾಡುಕೋಣ ಬೇಟೆಯಾಡಿದ ಓರ್ವ ಆರೋಪಿಯ ಬಂಧನ - ನಾಲ್ವರು ಪರಾರಿ

ಶಿರಸಿ: ತಾಲೂಕಿನ ಜಾನ್ಮನೆ ಉಪ ವಿಭಾಗದ, ಹುಲೇಕಲ್ ವಲಯದ ಮಠದೇವಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮೇಲ್ನೋಟಕ್ಕೆ ಕಾಡುಕೋಣವನ್ನು ಬೇಟೆ ಆಡಿರುವ ಖಚಿತ ಮಾಹಿತಿ ಮೇರೆಗೆ ಆರೋಪಿ ಅಬ್ದುಲ್ ಸಲೀಮ್ ಅಬ್ದುಲ್‌ರಬ್ಬು ಸಾಬ, (44) ನನ್ನು ಶಿರಸಿ ವಿಭಾಗದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಇದೇ ಗ್ರಾಮದ ಇನ್ನು ನಾಲ್ಕು ಆರೋಪಿಗಳಾದ ಹಸನ್ ಮೌಲಾಲಿ ಬೆಣ್ಣೆಸಾಬ, ಹನ್ನಾನ ಅಬ್ದುಲ್ ರಬ್ಬುಸಾಬ, ಸಲಿಂ ಉಸ್ಮಾನಸಾಬ ಹಾಗು ಅಬ್ದುಲ್ ಕರಿಂ ತಲೆ ಮೆರೆಸಿಕೊಂಡಿದ್ದಾರೆ. ಈ ಕುರಿತು ಹುಲೇಕಲ್ ವಲಯ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಬಂಧಿತ ಆರೋಪಿಯಿಂದ ಕಾಡುಕೋಣದ ಮಾಂಸದ ಅವಶೇಷ ಹಾಗು ತುಣುಕುಗಳು, ಪ್ಲಾಸ್ಟಿಕ್ ಚೀಲ ವಶಕ್ಕೆ ಪಡೆಯಲಾಗಿದೆ.

ಈ ಒಂದು ಕಾರ್ಯಾಚರಣೆಯನ್ನು ಶಿರಸಿ ವಿಭಾಗದ ಡಿಸಿಎಫ್ ಸಂದೀಪ ಸೂರ್ಯವಂಶಿ ಹಾಗು ಜಾನ್ಮನೆ ಉಪ ವಿಭಾಗದ ಎಸಿಎಫ್ ಹರೀಶ ಸಿ.ಎನ್ ಮಾರ್ಗದರ್ಶನ ಮತ್ತು ಹುಲೇಕಲ್ ವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಎಸ್. ನಿಂಗಾಣಿ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

Edited By : Nagaraj Tulugeri
PublicNext

PublicNext

29/04/2026 07:40 pm

Cinque Terre

7.92 K

Cinque Terre

0

ಸಂಬಂಧಿತ ಸುದ್ದಿ