ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣವನ್ನು ನಡುಗಿಸಿದ್ದ ರೌಡಿಶೀಟರ್ ಜಮೀರ್ ಅಹ್ಮದ್ ದರ್ಗಾವಾಲೆ ಬರ್ಬರ ಕೊಲೆ ಪ್ರಕರಣವನ್ನು ಮುಂಡಗೋಡ ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿ ಮಿಂಚಿದ್ದಾರೆ. ಬೆಂಗಳೂರಿನ ನೆಲಮಂಗಲದ ಬಳಿ ಹಂತಕರನ್ನು ಸಿನಿಮೀಯ ಮಾದರಿಯಲ್ಲಿ ಬೆನ್ನಟ್ಟಿ ಸೆರೆಹಿಡಿಯಲಾಗಿದೆ.
ಹತ್ಯೆಯ ಭೀಕರತೆ: ಕಳೆದ ರಾತ್ರಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಅಂಬಿಕಾ ಸಾವಜಿ ಹೋಟೆಲ್‌ನಲ್ಲಿ ಜಮೀರ್ ಅಹ್ಮದ್ ಊಟಕ್ಕೆ ಕುಳಿತಿದ್ದಾಗ, ಹಂತಕರು ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಪೈಶಾಚಿಕವಾಗಿ ಹತ್ಯೆ ಮಾಡಿದ್ದರು.
ನೋಡಿ ಇವರೇ ಆ ಸುಪಾರಿ ಹಂತಕರು (ಬಂಧಿತರು):
ಮಂಜುನಾಥ ನಾಗೇಂದ್ರ ಕಾಜಗಾರ (30) ಸಾಲಗಾಂವಿ (ಕೊಲೆಯ ಮಾಸ್ಟರ್ ಮೈಂಡ್), ಶ್ರೀಕಾಂತ ರಾಜಶೇಖರ ಕಿರಣ್ಣನವರ (22) ಇಂದಿರಾನಗರ, ಮಂಜುನಾಥ ವಿಷ್ಣು ಬೆಳಗಾವಿ (20) ಧಾರವಾಡ, ಅಭಿಷೇಕ ಮಲ್ಲಿಕಾರ್ಜುನ ಬಡಶೆಟ್ಟಿ (22) ಧಾರವಾಡ, ದೀಪಕ ನಾಗರಾಜ ನವಲಿ, ಧಾರವಾಡ
ಕೊಲೆಗೆ ಅಸಲಿ ಕಾರಣವೇನು?
ಪೊಲೀಸ್ ತನಿಖೆಯಲ್ಲಿ ಹಳೇ ದ್ವೇಷದ ವಾಸನೆ ಬಡಿದಿದೆ! ಮುಖ್ಯ ಆರೋಪಿ ಮಂಜುನಾಥ ಕಾಜಗಾರ ಮತ್ತು ಮೃತ ಜಮೀರ್ ನಡುವೆ ಮೀಟರ್ ಬಡ್ಡಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೀವ್ರ ವೈಷಮ್ಯವಿತ್ತು. ಇದೇ ಹಗೆತನದಿಂದ ಮಂಜುನಾಥ ಸುಪಾರಿ ನೀಡಿ ಜಮೀರ್‌ನನ್ನು ಮುಗಿಸಿದ್ದಾನೆ. ವಶಪಡಿಸಿಕೊಂಡ ವಸ್ತುಗಳು: ಕಂಟ್ರಿ ಮೇಡ್ ಪಿಸ್ತೂಲ್ 06 ಸಜೀವ ಗುಂಡುಗಳು. 01 ಕಾರು ಮತ್ತು 02 ಬೈಕ್‌ಗಳು.
ಪೊಲೀಸರ ಸಾಹಸಕ್ಕೆ ಸಲಾಂ:
ಉತ್ತರ ಕನ್ನಡ ಎಸ್ಪಿ ದೀಪನ್ ಎಮ್.ಎನ್, ಎಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ ತಂಡ ಹಗಲಿರುಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಮುಂಡಗೋಡ, ಯಲ್ಲಾಪುರ ಹಾಗೂ ಕಾರವಾರ ಟೆಕ್ನಿಕಲ್ ಸೆಲ್ ಸಿಬ್ಬಂದಿಗಳ ಚುರುಕಿನ ಕೆಲಸಕ್ಕೆ ಸಾರ್ವಜನಿಕರು ಫುಲ್ ಫಿದಾ ಆಗಿದ್ದಾರೆ.
Kshetra Samachara
26/04/2026 08:36 pm