ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳದಲ್ಲಿ ಅಕ್ರಮ ಮಣ್ಣು ಸಾಗಾಟ : ಜಿಲ್ಲಾಡಳಿತ ಯಾಕಿಷ್ಟು ಮೌನ?

ಕೊಪ್ಪಳ : ಕೊಪ್ಪಳ ಜಿಲ್ಲೆ ಇಲ್ಲಿಯವರೆಗೂ ಅಕ್ರಮ ಮರಳು ಸಾಗಾಟದ ಸುದ್ದಿಯಾಗಿತ್ತು. ಆದರೆ ಈಗ ಅಕ್ರಮವಾಗಿ ಮಣ್ಣು ಸಾಗಾಟದ ಮಾಡುತ್ತಿರುವುದು ಕಂಡು ಬಂದಿದೆ.

ಕಾರಟಗಿ ತಾಲೂಕಿನ ಯರಡೋಣಿಯ ಕೆರೆಯಲ್ಲಿ ಹಾಡ ಹಗಲೇ ಅಕ್ರಮ ಮಣ್ಣು ಸಾಗಣಿಕೆ ಮಾಡಲಾಗುತ್ತಿದೆ. ಮಣ್ಣುಸಾಗಾಟವಾಗುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಹತ್ತಾರು ಟ್ರಾಕ್ಟರ್, ಜೆಸಿಬಿ ಬಳಸಿ ನಿರಂತರವಾಗಿ ಅಕ್ರಮ ಮಣ್ಣು ಸಾಗಾಟವಾದರೂ ಕ್ರಮಕ್ಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಂದಾಯ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಲು ಆಗ್ರಹಿಸಿದ್ದಾರೆ.

Edited By :
PublicNext

PublicNext

19/04/2026 11:10 am

Cinque Terre

15.05 K

Cinque Terre

0