ಕೊಪ್ಪಳ : ಹಾಡಹಗಲೇ ಗಾಂಜಾ ಮಾರಾಟಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು, ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆ ಠಾಣೆಯ ಪೊಲೀಸರು ಬಂದಿಸಿದ್ದಾರೆ.
ಕೆಜಿಎಫ್ ನಗರ ಹೊರವಲಯದ ಯರಗಾನಹಳ್ಳಿ ಗ್ರಾಮದ ರಸ್ತೆಯಲ್ಲಿ ಗಾಂಜಾ ಮಾರಾಟದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಾಲೂರು ತಾಲೂಕಿನ ಗಗನ್ ಹಾಗೂ ಅಜಯ್ ಎಂಬ ಆರೋಪಿಗಳನ್ನು ಬಂದಿಸಿದ್ದು, ಬಂಧಿತರಿಂದ 12 ಸಾವಿರ ಮೌಲ್ಯದ 144 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ರಾಬರ್ಟ್ ಸನ್ ಪೇಟೆ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
Kshetra Samachara
04/05/2026 05:30 pm
LOADING...