ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿ ಹೊರಗಡೆ ಬರೆದ ಸಿಬ್ಬಂದಿ!- ಕೆಆರ್ ಎಸ್ ಆಕ್ರೋಶ

ಕೊಪ್ಪಳ: ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಔಷಧಿಗಳನ್ನು ಹೊರಗಡೆ ಬರೆದುಕೊಟ್ಟ ಆಸ್ಪತ್ರೆ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ ಬಳಿಕ ಬರೆದುಕೊಟ್ಟ ಔಷಧಿ ಮರಳಿ ಕೊಟ್ಟು ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ನೀಡಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

ಎಸ್.! ವೀಕ್ಷಕರೇ, ಸರ್ಕಾರಿ ಆಸ್ಪತ್ರೆಯಲ್ಲೇ ರೋಗಿಗಳಿಗೆ ವೈದ್ಯಕೀಯ ಔಷಧಿ ಸಿಗಬೇಕೆಂಬ ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ನಿಯಮ ಇದ್ದರೂ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆ ಅಧಿಕಾರಿಗಳು ಮಾತ್ರ ಹೊರಗಡೆ ಔಷಧಿ ಬರೆದು ಕೊಟ್ಟಿದ್ದಾರೆ.

ಈ ವಿಷಯವನ್ನು ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರು ಪ್ರಶ್ನೆ ಮಾಡಿದಾಗ, ನಾನು ಜನೌಷಧಿ ಮಳಿಗೆಯಲ್ಲಿ ಪಡೆಯಲಿ ಎಂದು ಬರೆದು ಕೊಟ್ಟಿದ್ದೆ ಎಂದು ಸಬೂಬು ಹೇಳಿ ಪುನಃ ಖಾಸಗಿ ಮೆಡಿಸಿನ್ ಮೆಡಿಕಲ್ ಗೆ ಒಪ್ಪಿಸಿ ಸರ್ಕಾರಿ ಆಸ್ಪತ್ರೆ ಔಷಧಿ ನೀಡಿದ್ದಾರೆ.

ಇದಲ್ಲದೆ, ಸರ್ಕಾರಿ ನಿಯಮ ಪ್ರಶ್ನೆ ಮಾಡಿದ ಕೆ.ಆರ್.ಎಸ್. ಕಾರ್ಯಕರ್ತ ಮಂಜುನಾಥ ಹಿರೇಮಠ ಜೊತೆ ವಾಗ್ವಾದ ನಡೆಸಿದ್ದಾರೆ.

ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದ ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತ ಮಂಜುನಾಥ ಹಿರೇಮಠ ಅವರು ಕೊಪ್ಪಳ ಡಿ.ಎಚ್.ಒ ಡಾ.ಲಿಂಗರಾಜ ಅವರಿಗೆ ಮಾಹಿತಿ ನೀಡಿದಾಗ ಅವರು ಏನಂದ್ರು ನೀವೊಮ್ಮೆ ಕೇಳಿ...

ಒಟ್ಟಾರೆ ಸರ್ಕಾರಿ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಔಷಧಿ ಕೊಡಬೇಕು, ಹೊರಗಡೆ ರೋಗಿಗಳನ್ನು ಕಳುಹಿಸಬಾರದು ಎಂಬ ನಿಯಮ ಮೀರಿ ನಡೆದುಕೊಂಡ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗೆ ಏನು ಕ್ರಮವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಷ್ಟಗಿ

Edited By :
Kshetra Samachara

Kshetra Samachara

04/05/2026 05:25 pm

Cinque Terre

1.54 K

Cinque Terre

0

ಸಂಬಂಧಿತ ಸುದ್ದಿ