ಗದಗ : ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ರಿ ಬೆಂಗಳೂರು ಜಿಲ್ಲಾ ಘಟಕ ಗದಗ ಆಶ್ರಯದಲ್ಲಿ ಗದಗ ತಾಲೂಕಿನ ಮಲಸಮುದ್ರ ಗ್ರಾಮದ ಆನಂದ ವೃದ್ಧಾಶ್ರಮದಲ್ಲಿ ವಯೋಸಹಜ ವೃದ್ಧ ತಾಯಂದಿರಿಗೆ ಹಣ್ಣು ಹಂಪಲು ಹಾಗೂ ತಲೆದಿಂಬುಗಳ ವಿತರಿಸುವ ಹಾಗೂ ಆತ್ಮಸ್ಥೈರ್ಯವನ್ನು ತುಂಬುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂಧರ್ಬದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್ ಸಂಘಟನಾ ಸಂಚಾಲಕ ಪಾಂಡು ಚವ್ಹಾಣ ಅವರು
ಮಕ್ಕಳನ್ನು ಕಷ್ಟಪಟ್ಟು ಸಾಕಿ, ಸಲುಹಿ ಉನ್ನತ ಸ್ಥಾನಕ್ಕೇರಿಸಿದರೂ, ಸಂಸ್ಕಾರ ಮರೆತ ಮಾನವೀಯ ಮೌಲ್ಯಗಳನ್ನು ಅರಿಯದ ಮಕ್ಕಳು ತಮ್ಮ ಪೋಷಕರನ್ನು ವೃದ್ಧಾಪ್ಯದಲ್ಲಿ ನಿರ್ಲಕ್ಷಿಸಿ ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.
ವಯಸ್ಸಾದ ವೃದ್ಧರಿಗೆ ಸುರಕ್ಷಿತ ವಸತಿ, ಪೌಷ್ಟಿಕ ಆಹಾರ, ವೈದ್ಯಕೀಯ ಸೇವೆಯನ್ನೂ ಒದಗಿಸುವ ಮೂಲಕ ವೃದ್ಧರ ಬಾಳಿನ ಬೆಳಕಾಗಿ ಆಶ್ರಯ ತಾಣವಾಗಿರುವ ಆನಂದ ವೃದ್ಧಾಶ್ರಮದ ಕಾರ್ಯವು ಶ್ಲಾಘನೀಯವಾಗಿದೆ. ಮಕ್ಕಳಿಗೆ ದೇಶದ ಸಂಸ್ಕೃತಿ, ಸಂಪ್ರದಾಯ ಮತ್ತು ನೈತಿಕತೆ ಮಾನವೀಯ ಮೌಲ್ಯಗಳ ಕುರಿತು ಅರಿವು ಮೂಡಿಸುವುದರಿಂದ ಹಿರಿಯರು ಪಾಲಕರು ನೆಮ್ಮದಿಯಿಂದ ತಮ್ಮ ಮಕ್ಕಳೊಂದಿಗೆ ಬದುಕುವ ವಾತಾವರಣವನ್ನು ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ನುಡಿದರು.ಜಿಲ್ಲಾ ಸಂವಿಕ್ಷಣಾಧಿಕಾರಿ ಡಾ. ವೆಂಕಟೇಶ್ ರಾಠೋಡ ಮಾತನಾಡಿ ಸಂಧ್ಯಾಕಾಲದಲ್ಲಿ ತಂದೆ ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗಿದೆ. ಆಸ್ತಿ ಅಂತಸ್ತು ಹಣ ಮುಖ್ಯವಲ್ಲ ನಮ್ಮವರನ್ನು ಜೋಪಾನ ಮಾಡುವ ಕಾರ್ಯ ದೊಡ್ಡದು ಅಂಥಹ ಮಹಾ ಸೇವೆಯನ್ನು ಈ ಆಶ್ರಮ ಮಾಡುತ್ತಿದೆ ಎಂದರು.ಪರಿಷತ್ ರಾಜ್ಯ ಮಾರ್ಗದರ್ಶಕರಾದ ಡಾ.ಶಾಂತಕುಮಾರ ಬಿ ಭಜಂತ್ರಿ ಮಾತನಾಡಿ, ನೋವು, ಕಷ್ಟಗಳನ್ನು ಮರೆತು ದೇವರಲ್ಲಿ ಧ್ಯಾನ ಮಾಡುತ್ತ ಸುಖ ಶಾಂತಿಯಿಂದ ಆಶ್ರಮದಲ್ಲಿ ಸಮಯ ಕಳೆಯಿರಿ. ನಿಮ್ಮ ಆಯುರ್ ಆರೋಗ್ಯ ಚೆನ್ನಾಗಿರಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುವೆ ಎಂದು ವೃದ್ಧ ತಾಯಂದಿರನ್ನು ಉದ್ದೇಶಿಸಿ ಮಾತನಾಡಿದರು.
ವೃದ್ಧಾಶ್ರಮದ ಸಂಸ್ಥಾಪಕ ಅಧ್ಯಕ್ಷರಾದ ಗಂಗಾಧರ ನಭಾಪುರ, ಮಾತನಾಡಿ ವೃದ್ಧ ತಾಯಂದಿರಿಗೆ ಮನೆಯ ವಾತಾವರಣ ನಿರ್ಮಾಣ ಮಾಡಿ ಸದಾ ಹಸನ್ಮುಖಿಗಳಾಗಿರುವ ಸಲುವಾಗಿ ಆಶ್ರಮದ ಪಕ್ಕದಲ್ಲಿ ಮಹಾ ಗಣಪತಿ ದೇವಸ್ಥಾನ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ ಇಲ್ಲಿರುವ ಪ್ರತಿಯೊಬ್ಬರನ್ನೂ ಆರೋಗ್ಯ ಯೋಗ, ಧ್ಯಾನದಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪ ಕೈಗೊಳ್ಳಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರಿಗೆ ಆಶ್ರಯ ಕಲ್ಪಿಸುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಅಧ್ಯಕ್ಷತೆಯ ನುಡಿಗಳನಾಡಿದ ಗದಗ ಜಿಲ್ಲಾಧ್ಯಕ್ಷೆ
. ಶ್ರೀಮತಿ ರತ್ನಾ ಗಿ.ಬದಿ ಮಾತುಗಳನ್ನಾಡಿ ಪರಿಷತ್ ಮೂಲಕ ಹಲವಾರು ರಚನಾತ್ಮಕ ಕಾರ್ಯ ಚಟುವಟಿಕೆಗಳನ್ನು ನಡೆಸಲು ಯೋಜನೆಯನ್ನು ಹಾಕಿಕೊಂಡಿದೆ.ಆಶ್ರಮದ ಫಲಾನುಭವಿಗಳಿಗೆ ತನುಮನ ಸಹಾಯ ಸಹಕಾರವನ್ನು ಮುಕ್ತವಾಗಿ ಹಂಚಿಕೊಳ್ಳುವ ಭರವಸೆಯನ್ನು ನೀಡಿದರು.
ಗದಗ ತಾಲೂಕಾ ಘಟಕದ ಅಧ್ಯಕ್ಷರಾದ ನೀಲು ರಾಠೋಡ ಸ್ವಾಗತಿಸಿದರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುನೀಲ ಲಮಾಣಿ ವಂದಿಸಿದರು, ಕೃಷ್ಣಪ್ಪ, ಮಂಗಳಗೌರಿ, ಪ್ರಭು, ಪದ್ಮಾ, ಮ್ಯಾಗೇರಿ ಸೇರಿದಂತೆ ಆಶ್ರಮದ ಸಿಬ್ಬಂದಿ ವರ್ಗ ಇತರರು ಉಪಸ್ತಿತರಿದ್ದರು.
Kshetra Samachara
20/04/2026 11:55 am