ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಜಾತ್ರಾ ಮಳಿಗೆ ತೆರವುಗೊಳಿಸುವಂತೆ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಮನವಿ

ಗದಗ:

ತೋಂಟದಾರ್ಯ ಜಾತ್ರಾ ಮಹೋತ್ಸವದ ಮಳಿಗೆಯನ್ನು ಕೂಡಲೇ ತೆರವುಗೊಳಿಸಬೇಕು ಅಂತ ಆಗ್ರಹಿಸಿ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ದಲಿತ ಸಮಿತಿ ಹಾಗೂ ಮಾದಿಗ ಸಮುದಾಯದ ಮುಖಂಡರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಈ ವೇಳೆ ರಾಜು ಖಾನಪ್ಪನವರ ಮಾತನಾಡಿ, ತೋಂಟದಾರ್ಯ ಮಠದ ಜಾತ್ರೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಅತ್ಯಂತ ನೋವಿನ ಸಂಗತಿ ಆಗಿದೆ. ಜಾತ್ರೆಗಳೆಂದರೆ ಅವುಗಳಿಗೆ ತನ್ನದೇ ಆದ ದಿನಾಂಕ ನಿಗದಿ ಮಾಡಲಾಗುತ್ತದೆ. ಆದರೆ, ಇಲ್ಲಿ ಬೇಕಾಬಿಟ್ಟಿಯಾಗಿ ಮಳಿಗೆ ಹಾಕಿದ್ದರಿಂದ ಈ ಅಪಘಾತ ಸಂಭವಿಸಿದ್ದು, ಇದಕ್ಕೆ ನೇರವಾಗಿ ಜಿಲ್ಲಾಡಳಿತ, ನಗರಸಭೆ ಹಾಗೂ ಮಳಿಗೆಗಳ ಟೆಂಡರ್ ದಾರರು ಹೊಣೆಯಾಗಿದ್ದಾರೆ ಅಂತ ಕರ್ನಾಟಕ ರಾಜ್ಯ ವಿವಿಧ ಹಿಂದೂಪರ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ದೂರಿದರು.

2016 ರಿಂದ ಅನಧಿಕೃತ ಮಳಿಗೆಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೂ ಕಣ್ಣಿದ್ದು ಕುರುಡರಂತೆ, ಬಾಯಿ ಇದ್ದು ಮುಖರಂತೆ, ಕಿವಿಯಿದ್ದು ಕಿವುಡರಂತೆ ಜಿಲ್ಲಾಡಳಿತ, ನಗರಸಭೆ ವರ್ತನೆ ಮಾಡುತ್ತಿವೆ. ಅದರ ಪರಿಣಾಮ ಈಗ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಅಂತ ಹೇಳಲಾಗುತ್ತಿದ್ದು, ಒಂದು ವೇಳೆ ಸಾವು-ನೋವು ಸಂಭವಿಸಿದ್ದಲ್ಲಿ ಉಗ್ರ ಹೋರಾಟ ಮಾಡ

Edited By : PublicNext Desk
Kshetra Samachara

Kshetra Samachara

04/05/2026 07:42 pm

Cinque Terre

6.3 K

Cinque Terre

0

ಸಂಬಂಧಿತ ಸುದ್ದಿ