ನರಗುಂದ: ರಾಜ್ಯಾದ್ಯಂತ ಅಸಹನೀಯ ರಣಬಿಸಿಲು ಆವರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಗದಗ ಜಿಲ್ಲೆಯಲ್ಲಿ ತಾಪಮಾನ 39-40 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ. ನರಗುಂದ ಪಟ್ಟಣದಲ್ಲೂ ಜನರು ಬಿಸಿಲಿನ ತೀವ್ರತೆಗೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ತಾಪಮಾನ ಏರಿಕೆ ಮತ್ತು ಆರೋಗ್ಯ ಸಮಸ್ಯೆಗಳು
ಮುಂಜಾನೆ 35 ಡಿಗ್ರಿ ಸೆಲ್ಸಿಯಸ್‌ನಿಂದ ಆರಂಭವಾಗುವ ಉಷ್ಣಾಂಶ, ಮಧ್ಯಾಹ್ನದ ವೇಳೆಗೆ 39-40 ಡಿಗ್ರಿಗೆ ತಲುಪುತ್ತಿದೆ. ಈ ತೀವ್ರ ಉಷ್ಣಾಂಶದಿಂದಾಗಿ ಜನರು ವಾಂತಿ, ಭೇದಿ, ಜ್ವರದಂತಹ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಬಿಸಿಲು ಹೆಚ್ಚಾದಂತೆ ಸನ್ ಸ್ಟ್ರೋಕ್ ಮತ್ತು ಹೀಟ್ ಸ್ಟ್ರೋಕ್ ಪ್ರಕರಣಗಳು ಕೂಡ ಏರಿಕೆಯಾಗುತ್ತಿವೆ.
ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಮಾಡಿದೆ. ನರಗುಂದದ ತಾಲೂಕಾಸ್ಪತ್ರೆಯಲ್ಲಿ ಐಸಿಯು ಬೆಡ್‌ಗಳನ್ನು ಮೀಸಲಿಡಲಾಗಿದೆ.
PublicNext
25/04/2026 10:55 am
LOADING...