ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ : ಕೋಣಾರ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ -ಗ್ರಾಮಸ್ಥರಲ್ಲಿ ಆತಂಕ

ಭಟ್ಕಳ : ತಾಲೂಕಿನ ಕೋಣಾರ ಗ್ರಾಮದ ವಸತಿ ಪ್ರದೇಶದಲ್ಲಿ ಎರಡು ಚಿರತೆಗಳು ಓಡಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಕೋಣಾರ ಗ್ರಾಮದ ಮಂಜುನಾಥ ಹೆಬ್ಬಾರ್ ಅವರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸುಮಾರು 2 ರಿಂದ 3 ವರ್ಷ ವಯಸ್ಸಿನ ಎರಡು ಚಿರತೆಗಳು ಒಂದರ ಹಿಂದೆ ಒಂದರಂತೆ ಗಂಭೀರವಾಗಿ ನಡೆದುಕೊಂಡು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯ ಕಂಡ ಮನೆಯವರು ತಕ್ಷಣವೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಇದು ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.

ಗ್ರಾಮದಲ್ಲಿ ಈಗಾಗಲೇ ನಾಯಿಯೊಂದು ಕಣ್ಮರೆಯಾಗಿದ್ದು, ಅದು ಚಿರತೆಗಳಿಗೆ ಆಹಾರವಾಗಿರಬಹುದೇ ಎಂಬ ಸಂಶಯ ಗ್ರಾಮಸ್ಥರನ್ನು ಕಾಡುತ್ತಿದೆ.

ಅರಣ್ಯ ಇಲಾಖೆಯ ಪ್ರತಿಕ್ರಿಯೆ ಮತ್ತು ಕ್ರಮಗಳು

ಚಿರತೆಗಳ ಓಡಾಟ ನಿಜವೆಂದು ಅರಣ್ಯ ಇಲಾಖೆಯೂ ದೃಢಪಡಿಸಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆಗಳ ಇರುವಿಕೆಯನ್ನು ಇಲಾಖೆ ಗಮನಿಸಿದ್ದು, ಸಿಬ್ಬಂದಿ ರಾತ್ರಿ ಗಸ್ತು ತಿರುಗುವಾಗಲೂ ಅವು ಕಾಣಿಸಿಕೊಂಡಿವೆ. ಆಹಾರ ಅರಸಿ ಚಿರತೆಗಳು ಜನವಸತಿ ಪ್ರದೇಶದತ್ತ ಬರುತ್ತಿವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Edited By :
PublicNext

PublicNext

20/04/2026 10:42 pm

Cinque Terre

23.34 K

Cinque Terre

0

ಸಂಬಂಧಿತ ಸುದ್ದಿ