ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಮಹಿಳಾ ಮೀಸಲಾತಿ ಕಸಿದು ಕಾಂಗ್ರೆಸ್ ಮಹಿಳೆಯರಿಗೆ ಮಾಡಿದ ಅಪಮಾನ -ಕಾಗೇರಿ ಆಕ್ರೋಶ

ಶಿರಸಿ: ಮಹಿಳೆಯರ 33% ಮೀಸಲಾತಿಯನ್ನು ಕಸಿದುಕೊಂಡ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮಿತ್ರ ಪಕ್ಷಗಳು ಮಹಿಳೆಯರ ಬಗ್ಗೆ ಕಿಂಚಿತ್ತೂ ಗೌರವ ಹೊಂದಿಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಳೆಯರನ್ನು ಒಂದು ಕಡೆ ಎತ್ತಿಕಟ್ಟುವುದು ಮತ್ತು ಇನ್ನೊಂದು ಕಡೆ ಕಡೆಗಣಿಸುವುದು ಕಾಂಗ್ರೆಸ್‌ನ ಮೊದಲಿನಿಂದಲೂ ಇರುವ ಖಯಾಲಿಯಾಗಿದೆ ಎಂದು ತೀವ್ರವಾಗಿ ಟೀಕಿಸಿದರು.

ಕಾಂಗ್ರೆಸ್ ವಿರುದ್ಧ ಕುಟುಂಬ ರಾಜಕಾರಣದ ಆರೋಪ

ಕಾಂಗ್ರೆಸ್ ಕುಟುಂಬ ರಾಜಕಾರಣವನ್ನು ಪೋಷಿಸುತ್ತಿದ್ದು, ತಮ್ಮ ಕುಟುಂಬಕ್ಕೆ ಪೂರಕವಾಗಿರುವ ಹಾಗೂ ವೈಯಕ್ತಿಕ ಹಿತಾಸಕ್ತಿಗಳನ್ನು ಕಾಪಾಡಲು ಹೊರಟಿದೆ ಎಂದು ಕಾಗೇರಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಅವರ ದ್ವಿಮುಖ ನೀತಿಯನ್ನು ದೇಶದ ಮಹಿಳೆಯರು ಖಂಡಿಸುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಬದ್ಧತೆ ಮತ್ತು ಮಹಿಳೆಯರ ಹೋರಾಟ

ಮಹಿಳಾ ಮೀಸಲಾತಿ ಅನುಷ್ಠಾನದ ವಿಷಯದಲ್ಲಿ ಭಾರತೀಯ ಜನತಾ ಪಕ್ಷ ಹಿಂದೆ ಸರಿಯುವ ಮಾತೇ ಇಲ್ಲ. ಇಂದಲ್ಲ ನಾಳೆ ನಾವು ಇದನ್ನು ಅನುಷ್ಠಾನ ಮಾಡಿಯೇ ಮಾಡುತ್ತೇವೆ ಎಂದು ಸಂಸದರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ರೇಖಾ ಹೆಗಡೆ, ಉಷಾ ಹೆಗಡೆ, ನಿರ್ಮಲಾ ಶೆಟ್ಟಿ, ಶರ್ಮಿಳಾ ಮಾದನಗಿರಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

Edited By : PublicNext Desk
PublicNext

PublicNext

21/04/2026 07:43 pm

Cinque Terre

14.51 K

Cinque Terre

0

ಸಂಬಂಧಿತ ಸುದ್ದಿ