ಬಾಗಲಕೋಟೆ: ಇಸ್ಪೀಟ್ ಹಾಗೂ ಬಡ್ಡಿ ದಂಧೆ ನಡೆಸುತ್ತಿದ್ದ ಎಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ಪೊಲೀಸ್ ಠಾಣೆಗೆ ಕರೆತಂದು ಆತನಿಂದ 170000 ರೂಪಾಯಿ ಲಂಚವನ್ನು ಪಡೆಯುತ್ತಿದ್ದ PSI ಹಾಗೂ ಕಾನ್ ಸ್ಟೇಬಲ್ ನನ್ನು ಲೋಕಾಯುಕ್ತ SP ಜೈಲಿಗೆ ಅಟ್ಟಿದ ಘಟನೆ ಬಾಗಲಕೋಟೆಯ ಕೆರೂರು ಪಟ್ಟಣದಲ್ಲಿ ನಡೆದಿದೆ.
ಬಾದಾಮಿ ತಾಲ್ಲೂಕಿನ ಬೆಳಗಂಟಿ ಗ್ರಾಮದ ಮುತ್ತಪ್ಪ ನಾಯ್ಕರ್ ಎಂಬಾತನನ್ನು ಕೆರೂರು ಪೊಲೀಸ್ ಠಾಣೆಯ PSI ಭೀಮಪ್ಪ ರಬಕವಿ ಹಾಗೂ ಕಾನ್ ಸ್ಟೇಬಲ್ ಸಂತೋಷ್ ಅವರು, ಬೈಕ್ ಸಮೇತ ಪೊಲೀಸ್ ಠಾಣೆಗೆ ಕರೆತಂದು ನೀನು ಇಸ್ಪೀಟ್ ಮತ್ತು ಬಡ್ಡಿ ದಂಧೆ ನಡೆಸ್ತೀಯಾ. ಹೀಗಾಗಿ ನಿನ್ನ ಮೇಲೆ ಕೇಸ್ ಮಾಡ್ತೀನಿ ಅಂತಾ ಬೆದರಿಕೆ ಹಾಕಿದ್ರು. ನಿನ್ನ ಮೇಲೆ ಕೇಸ್ ಹಾಕಬಾರದು ಅಂದ್ರೆ ನೀನು 170000 ಹಣ ಕೊಡಬೇಕು ಅಂತಾ ಮುತ್ತಪ್ಪನಿಗೆ ಡಿಮ್ಯಾಂಡ್ ಮಾಡಿದ್ರು.
ಹೀಗಾಗಿ ಮುತ್ತಪ್ಪ ಕೆರೂರು, PSI ಭೀಮಪ್ಪ ಹಾಗೂ ಕಾನ್ ಸ್ಟೇಬಲ್ ಸಂತೋಷ್ ಮೇಲೆ ಬಾಗಲಕೋಟೆ ಲೋಕಾಯುಕ್ತ SP ಮಹಾನಿಂಗ್ ನಂದಗಾವಿ ಅವರಿಗೆ ದೂರನ್ನು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ನಂದಗಾವಿ ನೇತೃತ್ವದ ತಂಡ ಪೊಲೀಸ್ ಠಾಣೆಯಲ್ಲಿಯೇ 170000 ಲಂಚವನ್ನು ಪಡೆಯುತ್ತಿದ್ದ ವೇಳೆ ದಾಳಿ ಮಾಡಿ PSI ಹಾಗೂ ಕಾನ್ ಸ್ಟೇಬಲ್ ನನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.
ಇತ್ತೀಚೆಗಷ್ಟೇ ಹುಬ್ಬಳ್ಳಿ- ಧಾರವಾಡದ ಕಮಿಷನರೇಟ್ ನಲ್ಲಿ ಕಾನೂನು ಸುವ್ಯವಸ್ಥೆ ಡಿಸಿಪಿ ಹುದ್ದೆಯಿಂದ ಬಾಗಲಕೋಟೆ ಜಿಲ್ಲಾ ಲೋಕಾಯುಕ್ತ SP ಯಾಗಿ ನಂದಗಾವಿ ವರ್ಗಾವಣೆ ಆಗಿದ್ದು, ಕೆಲವೇ ದಿನಗಳಲ್ಲಿ ಭ್ರಷ್ಟ ಪೊಲೀಸರನ್ನು ಜೈಲಿಗೆ ಅಟ್ಟಿದ್ದಾರೆ.
PublicNext
22/04/2026 07:37 pm
LOADING...