ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳಿಂಗಳಿ ಶರಣಬಸವೇಶ್ವರ ಪ್ರೌಢ ಶಾಲೆಗೆ ಶೇ. 96.63 ಫಲಿತಾಂಶ

ರಬಕವಿ-ಬನಹಟ್ಟಿ (ತೇರದಾಳ) : ಹಳಿಂಗಳಿ ಗ್ರಾಮದ ಶ್ರೀ ಸದ್ಗುರು ಶರಣಬಸವೇಶ್ವರ ಪ್ರೌಢ ಶಾಲೆಯ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.೯೬.೬೨ ರಷ್ಟಾಗಿದೆ.

ಸಂಜನಾ ಸಾಂಗಲಿ (೯೩.೬೦%) ಶಾಲೆಗೆ ಪ್ರಥಮ, ಭವಾನಿ ದೇಸಾಯಿ (೯೨.೬೪%) ಶಾಲೆಗೆ ದ್ವಿತೀಯ, ಪ್ರೀಯಾ ಅಥಣಿ (೯೧.೮೪%) ಪ್ರತಿಶತದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಪರೀಕ್ಷೆಗೆ ಕುಳಿತ ಒಟ್ಟು ೮೯ ವಿದ್ಯಾರ್ಥಿಗಳಲ್ಲಿ ೮೬ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, ಅತ್ಯುನ್ನತ ಶ್ರೇಣಿಯಲ್ಲಿ ೧೩, ಪ್ರಥಮ ಶ್ರೇಣಿ ೩೮, ದ್ವಿತೀಯ ಶ್ರೇಣಿ ೧೨, ತೃತೀಯ ಶ್ರೇಣಿಯಲ್ಲಿ ೨೩ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಶಿವಾನಂದ ಸ್ವಾಮೀಜಿ ಸೇರಿದಂತೆ ಆಡಳಿತ ಮಂಡಳಿ ಸರ್ವ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯ ಎಚ್.ಬಿ ಕಾಂಬಳೆ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

23/04/2026 06:12 pm

Cinque Terre

2.7 K

Cinque Terre

0