ರಬಕವಿ-ಬನಹಟ್ಟಿ: ತೇರದಾಳ ಪಟ್ಟಣದ ಪುರಸಭೆಗೆ ಆಡಳಿತಾಧಿಕಾರಿ, ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕಾರ ಅವರು ಸೋಮವಾರ ಭೇಟಿ ನೀಡಿ, ಸಿಬ್ಬಂದಿ ಸಭೆ ನಡೆಸಿದರು. ತದನಂತರ ಪುರಸಭೆ ನೀರು ಸರಬರಾಜು ಕಾರ್ಮಿಕರು ನಡೆಸುತ್ತಿರುವ ಮುಷ್ಕರಕ್ಕೆ ಸ್ಪಂದಿಸಿ, ಬಾಕಿ ಉಳಿದ ವೇತನವನ್ನು ಮೂರು ಕಂತುಗಳಲ್ಲಿ ಪಾವತಿಸುವುದಾಗಿ ತಿಳಿಸಿದರು.
ನಾಲ್ಕು ತಿಂಗಳ ವೇತನವನ್ನು ಸೋಮವಾರ ಅಥವಾ ಎರಡು ದಿನಗಳಲ್ಲಿ ಜಮೆ ಮಾಡಲಾಗುವುದು. ಹದಿನೈದು ದಿನ ಅಂದರೆ ಮೇ.15ನೇ ತಾರೀಖಿನೊಳಗೆ ಇನ್ನೆರಡು ಕಂತು ಮತ್ತು ತಿಂಗಳ ಕೊನೆಯ ಹಂತಕ್ಕೆ ಇನ್ನೆರಡರಂತೆ ಒಟ್ಟು ಎಂಟು ತಿಂಗಳ ಬಾಕಿ ಹಣ ಪಾವತಿಸುವುದಾಗಿ ತಿಳಿಸಿದರು.
ಹೀಗಾಗಿ ಪಟ್ಟಣಕ್ಕೆ ನೀರು ಪೂರೈಕೆಯ ಭರವಸೆ ಮೂಡಿದಂತಾಗಿದೆ.ಮುಂದುವರೆದು ಪುರಸಭೆ ಹಣಕಾಸಿನ ಮೂಲವಾಗಿರುವ ಬಾಡಿಗೆ, ತೆರಿಗೆ, ನಲ್ಲಿ ಬಿಲ್ ಗಳನ್ನು ಸರಿಯಾಗಿ ತುಂಬಿಕೊಳ್ಳುವಂತೆ ಸಿಬ್ಬಂದಿಗೆ ಖಡಕ್ ಆಗಿ ವಾರ್ನಿಂಗ್ ಮಾಡಿದರು. ತೆರಿಗೆ ವಸೂಲಾತಿಗಾಗಿ ಹೊಸದಾಗಿ ಈ ತಿಂಗಳು ಜಾಗೃತಿ ಮೂಡಿಸಿ, ಪ್ರಮುಖ ಭಾಗಗಳಲ್ಲಿ ಸ್ಟಾಲ್‍ಗಳನ್ನು ನಿರ್ಮಿಸುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರೊಬ್ಬರು ಇ ಆಸ್ತಿ ಆನ್‌ಲೈನ್ ಉತಾರ ತಿದ್ದುಪಡಿಗಾಗಿ ಮನವಿ ಮಾಡಿಕೊಂಡಾಗ ಸಿಬ್ಬಂದಿ ಧನಗರ ಉತ್ತರಿಸಿ, ನೂರು ಅರ್ಜಿಗೆ ಮೂರು ತಿದ್ದುಪಡಿ ಮಾತ್ರ ಆಗುತ್ತೆ ಅಂದದ್ದಕ್ಕೆ, ಎಸಿ ಪ್ರಶ್ನಿಸುತ್ತಾ, ಹಾಗ್ಯಾಕೆ? ತಿದ್ದುಪಡಿ ಆಗಬೇಕಲ್ಲ. ಸಂಬಂಧಿಸಿದಂತೆ ಪತ್ರ ಕಳಿಸಿ ಎಂದು ಸೂಚಿಸಿದರು. ವಾರ್ಡ್ ನಂ.15ರಲ್ಲಿ ಗಟಾರ ಸಮಸ್ಯೆಗೆ ಮುಕ್ತಿಕೊಡಿ ಎಂದು ಸಾರ್ವಜನಿಕರೊಬ್ಬರು ತಮ್ಮ ಅಳಲು ತೊಡಿಕೊಂಡರು.ಸಭೆಯಲ್ಲಿ ಮುಖ್ಯಾಧಿಕಾರಿ ಎಫ್.ಬಿ.ಗಿಡ್ಡಿ, ಮ್ಯಾನೇಜರ್ ಮಲ್ಲಿಕಾರ್ಜುನ ಬಿರಾದಾರಪಾಟೀಲ, ಕಿರಿಯ ಇಂಜಿನಿಯರ್ ಸೇರಿದಂತೆ ಹಲವು ಸಿಬ್ಬಂದಿಗಳು ಇದ್ದರು.
Kshetra Samachara
04/05/2026 06:44 pm
LOADING...