ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಕ್ಷಕನ ಮಗಳ ಸಾಧನೆ : ಸೌಮ್ಯಾ ಜಿಲ್ಲೆಗೆ 2, ವಲಯಕ್ಕೆ ಪ್ರಥಮ ಸ್ಥಾನ

ರಬಕವಿ-ಬನಹಟ್ಟಿ: ತೇರದಾಳದ ಗುರುಕುಲ ಸಂಸ್ಥೆಯ ಶ್ರೀ ಜೀನಸೇನಾಚಾರ್ಯ ಹೆಣ್ಣುಮಕ್ಕಳ ಶಾಲೆಯ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸೌಮ್ಯಾ ಸಂಜಯ ಹರವಿ ಈತಳು 620 ಅಂಕಗಳನ್ನು ಪಡೆದು ಜಿಲ್ಲೆಗೆ 2 ನೇ ಸ್ಥಾನ, ತೇರದಾಳ ವಲಯ ಮತ್ತು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಳ್ಳುವುದರ ಮೂಲಕ ಊರಿನ ಹೆಸರನ್ನು ಜಿಲ್ಲಾ ಮಟ್ಟಕ್ಕೆ ಪಸರಿಸಿದ್ದಾರೆ.

ತಂದೆ ಸಂಜಯ ಹರವಿ ಇವರು ತಾಲೂಕಿನ ಹನಗಂಡಿ ಗ್ರಾಮದ ಸರಕಾರಿ ಪ್ರೌಢ ಶಾಲಾ ಶಿಕ್ಷಕರಾಗಿದ್ದು, ಶಿಕ್ಷಕನ ಮಗಳು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಖುಷಿಪಟ್ಟಿದ್ದಾರೆ. ಸಾಧಕ ವಿದ್ಯಾರ್ಥಿನಿಗೆ ಊರಿನ ಗಣ್ಯರು, ಸಂಸ್ಥೆಯ ಮುಖ್ಯಸ್ಥರು ಹಾಗೂ ಸಮಸ್ತ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

ಜೀನಸೇನಾಚಾರ್ಯ ಹೆಣ್ಣುಮಕ್ಕಳ ಶಾಲೆಯ ಫಲಿತಾಂಶ ನೂರಕ್ಕೆ ನೂರರಷ್ಟಾಗಿದ್ದು, ವರ್ಷಾ ಮಹೇಂದ್ರಕರ (97.6) ಶಾಲೆಗೆ ದ್ವಿತೀಯ, ಸಂಜನಾ ಮಾಳಿ(96.36) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

23/04/2026 08:56 pm

Cinque Terre

3.36 K

Cinque Terre

0