ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಆಕಾಶದಿಂದ ಉದುರಿದ ಮುತ್ತಿನಂತ ಆಲಿಕಲ್ಲು ಆರಿಸಿದ ಮಹಿಳೆ - ಮಳೆಯಲ್ಲಿ ನೆನೆಯುತ್ತಾ ವ್ಯಕ್ತಿಯ ಭರ್ಜರಿ ಡ್ಯಾನ್ಸ್!

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುಡುತ್ತಿದ್ದ ಬಿಸಿಲ ಧಗೆಗೆ ಬ್ರೇಕ್ ಬಿದ್ದಿದ್ದು, ವರುಣದೇವ ತಂಪೆರೆದಿದ್ದಾನೆ. ಆಲ್ದೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಆಕಾಶದಿಂದ ಬುಟ್ಟಿಯಲ್ಲಿ ಸುರಿದಂತೆ ಆಲಿಕಲ್ಲುಗಳು ಬಿದ್ದಿವೆ.

ಅಡ್ಡಮಕ್ಕಿ ಗ್ರಾಮದಲ್ಲಿ ಮಹಿಳೆಯೊಬ್ಬರು ಬಿದ್ದಿದ್ದ ಆಲಿಕಲ್ಲುಗಳನ್ನು ಕುತೂಹಲದಿಂದ ಆರಿಸುತ್ತಿರುವ ದೃಶ್ಯಗಳು ಕಂಡುಬಂತು.

ಮತ್ತೊಂದೆಡೆ ಸುದೀರ್ಘ ಕಾಯುವಿಕೆಯ ನಂತರ ಬಂದ ಮಳೆ ಜನರಲ್ಲಿ ಹರ್ಷ ತಂದಿದೆ. ಆಲ್ದೂರು ಪಟ್ಟಣದ ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬರು ಮಳೆಯಲ್ಲಿ ನೆನೆಯುತ್ತಾ, ಸಂತೋಷದಿಂದ ಕುಣಿದು ಕುಪ್ಪಳಿಸುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕಾಫಿನಾಡಿನ ಜನರಿಗೆ ಬಿಸಿಲಿನ ಬೇಗೆಯಿಂದ ಮುಕ್ತಿ ನೀಡಿದ್ದು, ಮಲೆನಾಡಿನಲ್ಲಿ ಹಸಿರು ಮತ್ತೆ ನಳನಳಿಸುವಂತೆ ಮಾಡಿದೆ.

Edited By :
PublicNext

PublicNext

24/04/2026 08:00 pm

Cinque Terre

23.14 K

Cinque Terre

0

ಸಂಬಂಧಿತ ಸುದ್ದಿ