ಎನ್.ಆರ್. ಪುರ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದ್ರೆ ಮತ್ತೊಂದೆಡೆ ಭದ್ರಾ ಜಲಾಶಯದ ಹಿನ್ನೀರಿನಲ್ಲಿ ಆನೆಗಳ ಹಿಂಡು ಈಜುತ್ತಿರುವ ಅಪರೂಪದ ದೃಶ್ಯಗಳನ್ನು ಅನುಮತಿ ಇಲ್ಲದೇ ಡ್ರೋನ್ ಮೂಲಕ ಚಿತ್ರೀಕರಿಸುತ್ತಿರುವುದು ಈಗ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ ವನ್ಯ ಜೀವಿ ಸಂರಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡ್ರೋನ್ ಸದ್ದಿನಿಂದ ಬೆಚ್ಚಿಬೀಳುತ್ತಿರುವ ಆನೆಗಳು ದಿಕ್ಕಾಪಾಲಾಗಿ ಗ್ರಾಮಗಳತ್ತ ಮುಖ ಮಾಡುತ್ತಿವೆ. ಒಂದೆಡೆ ಅಪರೂಪದ ದೃಶ್ಯಗಳ ಸೆರೆಹಿಡಿಯುವ ಉತ್ಸಾಹ ಕಂಡುಬರುತ್ತಿದ್ದರೆ, ಮತ್ತೊಂದೆಡೆ ಸ್ಥಳೀಯ ನಿವಾಸಿಗಳು ಆನೆಗಳು ಗ್ರಾಮಕ್ಕೆ ನುಗ್ಗಿ ಬೆಳೆ ನಾಶಮಾಡಬಹುದೆಂಬ ಭೀತಿಯಲ್ಲಿದ್ದಾರೆ.
ಹಿನ್ನೀರಿನ ಪರಿಸರದಲ್ಲಿ ಕೇವಲ ಡ್ರೋನ್ ಹಾರಾಟ ಮಾತ್ರವಲ್ಲದೆ, ಪ್ರವಾಸಿಗರು ತಂಡೋಪತಂಡವಾಗಿ ಬಂದು ಅಕ್ರಮವಾಗಿ ಮೀನು ಹಿಡಿಯುವುದು, ಮದ್ಯ ಸೇವಿಸಿ ಮೋಜು-ಮಸ್ತಿ ಮಾಡುವ ಮೂಲಕ ಅರಣ್ಯದ ಶಾಂತಿಯನ್ನು ಕದಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ಅಕ್ರಮ ಚಟುವಟಿಕೆಗಳ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
PublicNext
05/05/2026 09:46 pm
LOADING...