ನಂಜನಗೂಡು : ವಕೀಲರ ಸಂಘದಿಂದ ನ್ಯಾಯಾಲಯದ ಆವರಣದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 135ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಕಮಲಾಕ್ಷ ಡಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿಯಲ್ಲ ಮಹಾನ್ ಶಕ್ತಿ ವಿಶ್ವದಲ್ಲೇ ಮಹಾನಾಯಕ.. ಅಂಬೇಡ್ಕರ್ ರವರು ಬರೆದ ಸಂವಿಧಾನವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಮೀಸಲಾತಿ ಒಂದು ವರ್ಗಕ್ಕೆ ಸೀಮಿತವಾಗಿಲ್ಲ ಎಲ್ಲ ವರ್ಗಕ್ಕೂ ಮೀಸಲಾತಿ ಇದೆ ಶಿಕ್ಷಣದ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬಹುದು ಅಂಬೇಡ್ಕರ್ ರವರಿಗೆ ನಾವು ಗೌರವ ಸಲ್ಲಿಸಬೇಕಾದರೆ ಅವರ ತತ್ವ ಸಿದ್ಧಾಂತ ಚಿಂತನೆಗಳನ್ನು ಸಂಪೂರ್ಣವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದರೆ ನಾವು ಸಲ್ಲಿಸುವಂತಹ ಗೌರವವಾಗಿದೆ ಅವರು ಬರೆದುಕೊಟ್ಟ ಸಂವಿಧಾನ ಸರ್ವಕಾಲಕ್ಕೂ ಪ್ರಸ್ತುತವಾಗಿದೆ.
ಅಂಬೇಡ್ಕರ್ ಅವರು ವೈಯಕ್ತಿಕವಾಗಿ ಏನನ್ನು ಪಡೆದುಕೊಂಡಿಲ್ಲ ಎಲ್ಲವನ್ನು ದೇಶದ ಅಭಿವೃದ್ಧಿಗಾಗಿ ಜನರ ಒಳಿತಿಗಾಗಿ ತಮ್ಮ ಸಂಪೂರ್ಣ ಜ್ಞಾನವನ್ನು ಬಳಸಿದ್ದಾರೆ ನಮ್ಮ ಮುಂದಿನ ಪೀಳಿಗೆ ಅವರ ಜ್ಞಾನವನ್ನು ತಲುಪಿಸುವಂತಹ ಕಾರ್ಯ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಕೀಲರ ಸಂಘದ ಅಧ್ಯಕ್ಷರಾದ ಮಹದೇವಸ್ವಾಮಿಯವರು ಮಾತನಾಡಿ ಭಾರತದ ಪ್ರತಿಯೊಬ್ಬ ಪ್ರಜೆ ಡಾ. ಬಿ ಆರ್ ಅಂಬೇಡ್ಕರ್ ರವರನ್ನು ಯಾಕೆ ನೆನಪು ಮಾಡಿಕೊಳ್ಳಬೇಕೆಂದರೆ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹಕ್ಕುಗಳು ಸೌಲಭ್ಯಗಳು ಕರ್ತವ್ಯಗಳನ್ನು ಕಾನೂನಾತ್ಮಕವಾಗಿ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನದಲ್ಲಿ ನೀಡಿದ್ದಾರೆ ಎಂದು ತಿಳಿಸಿದರು .
ನೂತನವಾಗಿ ನ್ಯಾಯಾಧೀಶರಾಗಿ ಆಯ್ಕೆಯಗೊಂಡ ಮಹದೇವಸ್ವಾಮಿ, ರಮ್ಯಾ ನ್ಯಾಯಾಧೀಶರಿಗೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಕೀಲರ ಮಕ್ಕಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸತೀಶ್ ಕೆ. ಜಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಸರಿತಾ ಕುಮಾರಿ ಎಎಂ ಒಂದನೇ ಅಪರ ಸಿವಿಲ್ ನ್ಯಾಯಾಧೀಶರು ಕುಮಾರಿ ಕೃತಿಕಾ ಈ ಪವರ್ ಎರಡನೇ ಅಪರ ಸಿವಿಲ್ ನ್ಯಾಯಾಧೀಶರು ಕೆಂಪರಾಜು ಉಪಾಧ್ಯಕ್ಷರು. ಎಂ ಕೆ ಬಸವಣ್ಣ ಪ್ರಧಾನಕಾರ್ಯದರ್ಶಿ ಹಿರಿಯ ಕಿರಿಯ ಎಲ್ಲಾ ವಕೀಲರು ಸಮಾರಂಭದಲ್ಲಿ ಭಾಗವಹಿಸಿದ್ದರು.
PublicNext
25/04/2026 06:31 pm