ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪದ್ರವ ಉಂಟು ಮಾಡಿ ಸಾರ್ವಜನಿಕರಿಗೆ ಶಾಂತಿ ಭಂಗ : ಆರೋಪಿಗೆ ಸೇವೆ ಶಿಕ್ಷೆ ವಿಧಿಸಿದ ನಂಜನಗೂಡು ನ್ಯಾಯಾಲಯ

ನಂಜನಗೂಡು: ಉಪದ್ರವ ಉಂಟು ಮಾಡಿ ಸಾರ್ವಜನಿಕರಿಗೆ ಶಾಂತಿ ಭಂಗ ಮಾಡಿದ ವ್ಯಕ್ತಿಗೆ ನಂಜನಗೂಡು ಪ್ರಧಾನ ಸಿವಿಲ್ ನ್ಯಾಯಾಲಯ ಸೇವೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಹೌದು.. ನಂಜನಗೂಡು ತಾಲ್ಲೂಕಿನ ಕೆಬ್ಬೇಪುರ ಗ್ರಾಮದ ಸಚಿನ್ ಎಂಬ ವ್ಯಕ್ತಿಯು ಸಾರ್ವಜನಿಕವಾಗಿ ಉಪದ್ರವ ಉಂಟು ಮಾಡಿ, ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಿದ್ದ. ಭಾರತೀಯ ನ್ಯಾಯ ಸಂಹಿತೆ ಕಲಂ 270 ಮತ್ತು 355 ರ ರೀತ್ಯಾ ಅಪರಾಧ ಎಸಗಿದ್ದು, ಈ ಬಗ್ಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಐ ಆನಂದ್ ರವರು ಪ್ರಕರಣ ದಾಖಲು ಮಾಡಿಕೊಂಡು, ನಂಜನಗೂಡಿನ ಘನ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀ ಸತೀಶ್ ರವರು ಆರೋಪಿಗೆ ಸಮುದಾಯ ಸೇವೆ ಶಿಕ್ಷೆ ವಿಧಿಸಿದ್ದು, ಅದರಂತೆ ಆರೋಪಿಯು ದಿನಾಂಕ 01/5/2026 ರಿಂದ 30/5/2026ರವರೆಗೆ 1 ತಿಂಗಳು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ಮಾಡುವುದರ ಜೊತೆ ಆಸ್ಪತ್ರೆಯ ಸಿಬ್ಬಂದಿಗಳ ಜೊತೆ ಕೆಲಸ ನಿರ್ವಹಣೆ ಹಾಗೂ ದಿನಾಂಕ 01/6/2026 ರಿಂದ 30/6/2026ರ ವರೆಗೆ ನಂಜನಗೂಡು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಟ್ರಾಫಿಕ್ ಸಂಬಂಧ ಟ್ರಾಫಿಕ್ ಸಿಗ್ನಲ್ ಕೆಲಸಗಳನ್ನು ನಿರ್ವಹಿಸುವಂತೆ ಒಟ್ಟು 2 ತಿಂಗಳು ಸಮುದಾಯ ಸೇವಾ ಶಿಕ್ಷೆ ನೀಡಿ ಆದೇಶ ಹೊರಡಿಸಿರುತ್ತಾರೆ, ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ರಾಜಣ್ಣ ರವರು ಸರ್ಕಾರದ ಪರವಾದ ಮಂಡಿಸಿದರು.

Edited By : Nirmala Aralikatti
Kshetra Samachara

Kshetra Samachara

01/05/2026 12:54 pm

Cinque Terre

820

Cinque Terre

0

ಸಂಬಂಧಿತ ಸುದ್ದಿ