ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಸ್ತೆಯಲ್ಲಿ ಬಿದ್ದ ಮಣ್ಣು ತೆರವಿಗಾಗಿ ಕಿರಿಕ್...ಮೂವರ ಮೇಲೆ ಹಲ್ಲೆ...ದಂಪತಿ ವಿರುದ್ಧ FIR...

ಮೈಸೂರು : ರಸ್ತೆಯಲ್ಲಿ ಬಿದ್ದ ಮಣ್ಣನ್ನು ತೆರವುಗೊಳಿಸುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮೂವರು ಗಾಯಗೊಂಡ ಘಟನೆ ಹುಣಸೂರಿನಲ್ಲಿ ನಡೆದಿದೆ.ಈ ಸಂಬಂಧ ಹಲ್ಲೆ ನಡೆಸಿದ ದಂಪತಿ ವಿರುದ್ಧ ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಣಸೂರು ಟೌನ್ ಹತ್ತಿಮರ ಬೀದಿ ನಿವಾಸಿಗಳಾದ ಸಾಕಮ್ಮ,ರಮೇಶ್ ನಾಯಕ ಹಾಗೂ ಶ್ರೀನಿವಾಸ್ ಹಲ್ಲೆಗೆ ಒಳಗಾದವರು.ಹಾಲಿನ ಡೈರಿ ಸೆಕ್ರೆಟರಿ ವಿದ್ಯಾ ಹಾಗೂ ಪತಿ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾಕಮ್ಮ ರವರಿಗೆ ಸೇರಿದ ಖಾಲಿ ಸೈಟಿನಲ್ಲಿ ಮಣ್ಣು ಸುರಿಯಲಾಗಿತ್ತು.ಇದರಲ್ಲಿ ಸ್ವಲ್ಪ ಮಣ್ಣು ರಸ್ತೆಯಲ್ಲಿ ಹರಡಿತ್ತು.ಇದನ್ನು ತೆರವುಗೊಳಿಸುವಂತೆ ಶಿವಕುಮಾರ್ ಹಾಗೂ ವಿದ್ಯಾ ಕಿರಿಕ್ ತೆಗೆದಿದ್ದರು. ಈ ಸಂಬಂಧ ಶುರುವಾದ ಗಲಾಟೆಯಲ್ಲಿ ಸಾಕಮ್ಮ,ಶ್ರೀನಿವಾಸ್ ಹಾಗೂ ರಮೇಶ್ ನಾಯಕ ಮೇಲೆ ಹಲ್ಲೆ ನಡೆದಿದೆ.ಶಿವಕುಮಾರ್ ಹಾಗೂ ವಿದ್ಯಾ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

Edited By : Vinayak Patil
PublicNext

PublicNext

01/05/2026 03:59 pm

Cinque Terre

18.03 K

Cinque Terre

0

ಸಂಬಂಧಿತ ಸುದ್ದಿ