ನರಗುಂದ: ಕುಡಿಯುವ ನೀರು ಸರಬರಾಜು ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಹೌದು ಮಲಪ್ರಭಾ ನದಿಯ ಮೂಲಕ ನೀರು ಪೂರೈಕೆ ವಿಳಂಬವಾಗಿರುವ ಕಾರಣ ಗ್ರಾಮದಲ್ಲಿ 20 ದಿನಕ್ಕೆ ಒಮ್ಮೆ ನೀರು ಪೂರೈಕೆ ಆಗುತ್ತಿದೆ. ಬನಹಟ್ಟಿ ಹಾಗೂ ಮೂಗನೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಇನ್ನು ಎರಡು ಗ್ರಾಮದಲ್ಲಿ ಸುಮಾರು 8 ಸಾವಿರ ಜನ ಸಂಖ್ಯೆ ಹೊಂದಿದೆ. ಆದ್ರೆ 20 ದಿನಕ್ಕೆ ನೀರು ಕೊಡ್ತಾರೆ ಕಲುಷಿತವಾಗಿ ನೀರಿನಲ್ಲಿ ಹುಳುಗಳು ಬರುತ್ತಿವೆ.ಈ ನೀರು ಕುಡಿದು ಮಕ್ಕಳು,ಮಹಿಳೆಯರು ವೃದ್ಧರು ವಾಂತಿ ಭೇದಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕ ಇದ್ದರೂ ಇಲ್ಲದಂತಾಗಿದೆ.
ಶುದ್ಧ ನೀರಿನ ಘಟಕ ಸಂಪೂರ್ಣ ಕೆಟ್ಟು ಹಾಳಾಗಿದೆ.ಕೆರೆಯ ನೀರು ಸಹ ಕಲುಷಿತವಾಗಿದೆ. ಹೀಗಾಗಿ ನೀರಿನ ಸಮಸ್ಯೆಗೆ ಮುಕ್ತಿಕೊಡಿ ಎಂದು ಗೋಳಾಡುತ್ತಿದ್ದಾರೆ.ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತ್ ಗೆ ಖಾಲಿ ಕೊಡಗಳು, ಜಾನುವಾರು ಸಮೇತ ಮುತ್ತಿಗೆ ಹಾಕಿದ್ದಾರೆ. ಕೂಡಲೇ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
PublicNext
25/04/2026 09:14 pm
LOADING...