ಬೆಂಗಳೂರು/ ಮುದ್ದೇಬಿಹಾಳ: ಜನರ ಕೈಯಲ್ಲಿ ಆಂಡ್ರಾಯ್ಡ್ ಮೊಬೈಲ್ ಬಂದ ಮೇಲೆ ಇಂಟರ್ನೆಟ್ ಅನ್ನು ಬಳಸಿಕೊಂಡು ಇದೀಗ ಹಳ್ಳಿಯ ಜನರೂ ವಿಡಿಯೋ ಮಾಡುವ ಮೂಲಕ ತಮ್ಮ ಗ್ರಾಮದ ಅಭಿವೃದ್ಧಿ ಮಾಡಿಕೊಡಿ ಅಂತಾ ಶಾಸಕರಿಗೆ ಮನವಿ ಸಲ್ಲಿಸುವ ಮಟ್ಟಕ್ಕೆ ತಲುಪಿರೋದು ಒಳ್ಳೆಯ ಬೆಳವಣಿಗೆಯೇ ಸರಿ. ಮುದ್ದೇಬಿಹಾಳ ತಾಲ್ಲೂಕಿನ ಕಾಳಗಿ ಎಂಬ ಗ್ರಾಮದ ಕೆಲವರು ತಮ್ಮ ಶಾಸಕರಾದ ಅಪ್ಪಾಜಿ ನಾಡಗೌಡ ಅವರಿಗೆ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ತಾವು ಶಾಸಕರಾಗಿ ಮೂರು ವರ್ಷಗಳೇ ಕಳೆಯುತ್ತಿವೆ. ಆದರೆ, ನಮ್ಮೂರಿನ ಯಾವ ಕೆಲಸವೂ ಆಗಿಲ್ಲ. ದಯವಿಟ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಿ ಅಂತಾ ಮನವಿ ಮಾಡಿಕೊಂಡಿರೋದು ಆ ಭಾಗದಲ್ಲಿ ಎಲ್ಲರ ಗಮನ ಸೆಳೆದಿದೆ!
PublicNext
26/04/2026 02:20 pm
LOADING...