ಅಜ್ಜಂಪುರ: ತಾಲ್ಲೂಕಿನ ಗಡಿಹಳ್ಳಿ ಮತ್ತು ನಂದಿಪುರ ಗ್ರಾಮಗಳಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಜ್ಜಂಪುರ ಪಿಎಸ್‌ಐ ಗಜೇಂದ್ರ ನೇತೃತ್ವದ ತಂಡ ನಡೆಸಿದ ದಾಳಿಯಲ್ಲಿ, ಗಡಿಹಳ್ಳಿಯ ಆಲದ ಮರದ ಕೆಳಗೆ ಮದ್ಯ ನೀಡುತ್ತಿದ್ದ ಅಣ್ಣಪ್ಪಸ್ವಾಮಿ ಹಾಗೂ ನಂದಿಪುರದಲ್ಲಿ ಚಿಲ್ಲರೆ ಅಂಗಡಿ ಮುಂದೆ ಅಕ್ರಮ ಚಟುವಟಿಕೆಗೆ ಪ್ರಚೋದನೆ ನೀಡುತ್ತಿದ್ದ ಮಂಜಪ್ಪ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿ ಮದ್ಯದ ಖಾಲಿ ಪ್ಯಾಕೆಟ್‌ಗಳು, ಲೋಟಗಳು ಹಾಗೂ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
Kshetra Samachara
26/04/2026 09:00 pm
LOADING...