ನವಲಗುಂದ: ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಕೃಷಿಕ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸೋಮಲಿಂಗಪ್ಪ ಬಳಿಗೇರ ಹೇಳಿದರು.
ಪಟ್ಟಣದ ಪಶುಆಸ್ಪತ್ರೆ ಆವರಣದಲ್ಲಿ ನಡೆದ ಜಾನುವಾರುಗಳಿಗೆ 9ನೇ ಸುತ್ತಿನ ರಾಷ್ಟ್ರೀಯ ಕಾಲು ಮತ್ತು ಬಾಯಿಬೇನೆ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಶುವೈದ್ಯಾಧಿಕಾರಿ ಮನೋಹರ ದ್ಯಾಬೇರಿ ಮಾತನಾಡಿ, ಕಾಲುಬಾಯಿ ರೋಗವು ಎತ್ತು, ಹೋರಿ, ಹಸು, ಎಮ್ಮೆಗಳಲ್ಲಿ ವ್ಯಾಪಕ ಹರುಡುತ್ತದೆ. ಇದರಿಂದ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಮೂರು ತಿಂಗಳು ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸುವುದು ಅತ್ಯಗತ್ಯ. ಒಂದು ತಿಂಗಳವರೆಗೆ ಇಲಾಖೆಯ ಸಿಬ್ಬಂದಿ ತಾಲೂಕಿನ ಎಲ್ಲ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲಿದ್ದಾರೆ. ತುರ್ತು ಪಶುವೈದ್ಯಕೀಯ ಚಿಕಿತ್ಸೆಗೆ ಸಹಾಯವಾಣಿ 1962 ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಈ ವೇಳೆ ರೈತ ಪ್ರಕಾಶ ಶಿಗ್ಲಿ, ಸಂತೋಷ ಪಾಟೀಲ, ಸುರೇಶ ಹಡಪದ, ಈಶ್ವರ ಸಂಗಟಿ, ನಾಗನಗೌಡ ಪಾಟೀಲ, ಬಸವರಾಜ ಮೊರಬದ, ಮೌನೇಶ ಮರೀತೆಪ್ಪನವರ, ಮಂಜುನಾಥ ಡೊಳ್ಳಿ, ಶಿವಾನಂದ ಹಳ್ಳಿ ಇದ್ದರು.
Kshetra Samachara
27/04/2026 09:33 am
LOADING...