ನವಲಗುಂದ: ಪಟ್ಟಣದ ಶ್ರೀ ಸಂಸ್ಥಾನ ಪಂಚಗ್ರಹ ಹಿರೇಮಠದಲ್ಲಿ ಜರುಗುತ್ತಿರುವ ಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ಪೂರ್ವ ತಯಾರಿಯನ್ನು ಶಾಸಕ ಎನ್.ಎಚ್.ಕೋನರೆಡ್ಡಿ ವೀಕ್ಷಣೆ ಮಾಡಿದರು.13ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ 11ದಿನ ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಅವರಿಂದ ನಿತ್ಯ ಪ್ರವಚನ ನಡೆಸುತ್ತಿದ್ದು, ದಿ.12ರಂದು ಪಂಚ ಪೀಠಾಧೀಶ್ವರ ಅಡ್ಡಪಲ್ಲಕ್ಕಿ ಉತ್ಸವ ಜರುಗಿತಿದ್ದು, ದಿ.13ರಂದು ನೂತನ ಶ್ರೀಗಳ ಪಟ್ಟಾಧಿಕಾರ ಮತ್ತು ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.
ಈ ವೇಳೆ ನೂತನ ಉತ್ತರಾಧಿಕಾರಿ ಶ್ರೀಗಳಾದ ವೀರಬಸವ ದೇವರು, ಪಾಂಡಪ್ಪ ಕೋನರೆಡ್ಡಿ, ಅಣ್ಣಪ್ಪ ಬಾಗಿ, ದೇವೇಂದ್ರಪ್ಪ ಹಳ್ಳದ, ಶಶಿಧರ ಭರತಭೋಜನಮಠ, ಯಲ್ಲಪ್ಪ ಭೋವಿ, ಮದರ ಉಗರಗೋಳ ಸೇರಿದಂತೆ ಅನೇಕರು ಇದ್ದರು.
Kshetra Samachara
01/05/2026 11:43 am
LOADING...