ನವಲಗುಂದ: ಕೇಂದ್ರ ಸರ್ಕಾರದ ಕೃಷಿ ನೀತಿಗಳಲ್ಲಿನ ಲೋಪದೋಷ ಸರಿಪಡಿಸುವಂತೆ ಒತ್ತಾಯಿಸಿ ಹಾಗೂ ಕೃಷಿ ಪರಿಕರಗಳ ಮಾರಾಟಗಾರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ತಾಲ್ಲೂಕು ಘಟಕದಿಂದ ವ್ಯಾಪಾರ ಸ್ಥಗಿತಗೊಳಿಸಿ ತಹಸೀಲ್ದಾರ್ ಕಚೇರಿ ಶಿರಸ್ತೇದಾರ್ ಗಣೇಶ ಚಳ್ಳಕೆರೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೃಷಿ ಮಾರಾಟಗಾರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ನವದೆಹಲಿ ಭಾರತೀಯ ಕೃಷಿ ಮಾರಾಟಗಾರರ ಸಂಘದ ಕರೆಯಂತೆ ಮಾರಾಟಗಾರರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ರಸಗೊಬ್ಬರ ಮೇಲೆ ಮಾರಾಟಗಾರರಿಗೆ ಶೇ.ಲಾಭಾಂಶ ನೀಡಬೇಕು. ಬೀಜ, ಗೊಬ್ಬರ, ಕ್ರಿಮಿನಾಶಕ ಕಳಪೆ ಗುಣಮಟ್ಟ ಕಂಡುಬಂದರೆ ನೇರವಾಗಿ ಉತ್ಪಾದನಾ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಮಾರಾಟಗಾರರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಬೇಕು. ಯೂರಿಯಾ ಜತೆಗೆ ಬೇಡಿಕೆ ಇಲ್ಲದ ಇತರೆ ಉತ್ಪನ್ನ ಕಡ್ಡಾಯವಾಗಿ ಖರೀದಿಸಬೇಕು ಎಂಬ ಒತ್ತಡವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ರೈತರಿಗೆ ರಸಗೊಬ್ಬರ ವಿತರಣೆಯನ್ನು ಎಫ್.ಐ.ಡಿ ಮತ್ತು ಕೆ.ಕಿಸಾನ್ ತಂತ್ರಾಂಶದ ಮೂಲಕ ವಿತರಣೆಯಿಂದ ವಿನಾಯಿತಿ ನೀಡಬೇಕು. ಮಾರಾಟಗಾರರಿಗೆ ಮತ್ತು ರೈತರಿಗೆ ಸಮಸ್ಯೆಯಾಗಿರುವ ಇನ್ನೂ ಅನೇಕ ಬೇಡಿಕೆ ಈಡೇರಿಸಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.
ಮಲ್ಲಕಾರ್ಜುನ ತಿರ್ಲಾಪುರ, ಹರೀಶ್ ಮಂಗನಹಳ್ಳಿ, ಗುರುರಾಜ ಧಾರವಾಡ, ಸುರೇಶ ಯಕ್ಕುಂಡಿ, ಶ್ರೀನಿವಾಸ ಮಂಗನಹಳ್ಳಿ, ಶಶಾಂಕ ಗುಜ್ಜಳ, ಚನ್ನವೀರಪ್ಪ ಅಳಗುಂಡಗಿ, ವಿರೇಶ ಚಿಟ್ಟಿ, ಸದ್ದಾಂ ಬೆಟಗೇರಿ, ಬಸಲಿಂಗಪ್ಪ ಶೀಲವಂತರ, ಬಸನಗೌಡ ಕಲಾಲಬಂಡಿ, ಶಶಿ ತಿರ್ಲಾಪುರ, ಚಂದಪ್ಪ ಚಲವಾದಿ ಇತರರು ಇದ್ದರು.
Kshetra Samachara
01/05/2026 11:44 am
LOADING...