ನವಲಗುಂದ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಮನೆ ಗಣತಿ ಕಾರ್ಯವನ್ನು ತ್ವರಿತವಾಗಿ ಮುಗಿಸಲಾಗಿದ್ದು, ಗಣತಿದಾರರು ಶಿಸ್ತುಬದ್ಧವಾಗಿ ದತ್ತಾಂಶ ಸಂಗ್ರಹಿಸಿದ್ದಾರೆ ಎಂದು ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮನೆಗಣತಿ ಪೂರ್ಣಗೊಳಿಸಿದ ಗಣತಿದಾರರನ್ನು ಸನ್ಮಾನಿಸಿ ಮಾತನಾಡಿದ ಅವರು ನಗರದಲ್ಲಿ ಗಣತಿಕಾರ್ಯ ಇನ್ನೂ ನಡೆದಿದೆ. ಕೆಲಸದ ವೇಳೆ ತಾಂತ್ರಿಕ ಸಮಸ್ಯೆಗಳು ಎದುರಾದರೆ ತಕ್ಷಣ ತಾಂತ್ರಿಕ ಸಿಬ್ಬಂದಿ ನೆರವು ಪಡೆಯಬೇಕು ಅಲ್ಲದೇ ತಾಪಮಾನ ಹೆಚ್ಚಾಗುತ್ತಿದ್ದು, ಗಣತಿದಾರರು ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಈ ವೇಳೆ ತಹಶೀಲ್ದಾರ ಸುಧೀರ ಸಾಹುಕಾರ, ಶಿರಸ್ತೇದಾರ ಗಣೇಶ ಚಳ್ಳಿಕೇರಿ ಸೇರಿದಂತೆ ಗಣತಿದಾರರು ಇದ್ದರು.
Kshetra Samachara
06/05/2026 09:27 am
LOADING...