ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 28-04-2026

ಮೇಷ: ದಿನವಿಡೀ ಆನಂದದಲ್ಲಿ ಕಾಲಯಾಪನೆ. ಮಂಗಳವಾರ ಎಲ್ಲವೂ ಶುಭದಾಯಕ. ಉದ್ಯೋಗದಲ್ಲಿ ಸ್ಥಿರವಾಗುವ ನಿರ್ಧಾರ. ಉದ್ಯಮದಲ್ಲಿ ಎಲ್ಲ ಸಮಸ್ಯೆಗಳು ದೂರ.

ವೃಷಭ: ನಿಮ್ಮ ಪ್ರಗತಿಗೆ ತಡೆ ಇಲ್ಲ. ಅರ್ಧಕ್ಕೆ ನಿಂತಿರುವ ಕಾರ್ಯಗಳು ಪೂರ್ಣರೂಪಕ್ಕೆ. ವಿತ್ತಸಂಸ್ಥೆಯಿಂದ ಧನಸಹಾಯ ಸಕಾಲಕ್ಕೆ ಲಭ್ಯ. ವ್ಯವಹಾರ ನಿಮಿತ್ತ ಸಣ್ಣ ಪ್ರವಾಸದ ಸಾಧ್ಯತೆ.

ಮಿಥುನ: ಉದ್ಯೋಗದಲ್ಲಿ ಸ್ವಲ್ಪ ಪ್ರಗತಿ. ಸೇವಾ ಹಿರಿತನಕ್ಕೆ ಮಾನ್ಯತೆ. ಸ್ವಂತ ಉದ್ಯಮ ಆರ್ಥಿಕ ಮುಗ್ಗಟ್ಟು ಪರಿಹಾರ. ಮಹಿಳೆಯರ ಸ್ವಾವಲಂಬನೆ ಸಾಧನೆ ಪ್ರಗತಿಯಲ್ಲಿ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣ.

ಕರ್ಕಾಟಕ: ವಿಚಿತ್ರ ಘಟನೆಗಳಿಂದ ಕಂಗೆಡದಿರಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಕೃಷ್ಯುತ್ಪನ್ನ ಮಾರಾಟದಿಂದ ಲಾಭ. ಉದ್ಯೋಗ ಅರಸುತ್ತಿರುವವರ ಪ್ರಯತ್ನ ಸಫಲ.

ಸಿಂಹ: ಸರಕಾರಿ ಅಧಿಕಾರಿಗಳಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಪರದೇಶದಲ್ಲಿರುವ ಬಂಧುಗಳಿಂದ ಶುಭವಾರ್ತೆ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

ಕನ್ಯಾ: ಆಯಕಟ್ಟಿನ ಸ್ಥಾನದಲ್ಲಿ ಕರ್ತವ್ಯ. ವಿದ್ಯುತ್ ಮತ್ತು ಇಲೆಕ್ಟ್ರಾನಿಕ್ಸ್ ಉಪಕರಣ ವ್ಯಾಪಾರಿಗಳಿಗೆ ಉತ್ತಮ ಆದಾಯ. ವಿವಾಹಾಸಕ್ತರಿಗೆ ಒಳ್ಳೆಯ ಸಂಬಂಧ ಕೂಡಿ ಬರುವ ಸಾಧ್ಯತೆ.

ತುಲಾ: ಭವಿಷ್ಯದ ಕುರಿತು ಚಿಂತೆ ಬೇಡ.ಉದ್ಯೋಗ, ವ್ಯವಹಾರದಲ್ಲಿ ಒಳ್ಳೆಯ ಹೆಸರು. ನೌಕರ ವರ್ಗದ ಉತ್ತಮ ಸಹಕಾರ. ದೈವಾನುಗ್ರಹ ಪ್ರಾಪ್ತಿಗೆ ಸಾಧನೆ ಮುಂದುವರಿಕೆ.

ವೃಶ್ಚಿಕ: ಉದ್ಯೋಗದಲ್ಲಿ ಹಂತಹಂತದ ಅಭಿವೃದ್ಧಿ. ಸ್ವಂತ ಉದ್ಯಮದ ತೃಪ್ತಿಕರ ಬೆಳವಣಿಗೆ. ಪರಿಸರ ನೈರ್ಮಲ್ಯ ರಕ್ಷಣೆಯಲ್ಲಿ ಭಾಗಿ. ದೇವಾಲಯಕ್ಕೆ ಭೇಟಿ.

ಧನು: ಹಿತಶತ್ರುಗಳ ಬಾಧೆಯಿಂದ ಬಿಡುಗಡೆ. ಉದ್ಯೋಗ ಸ್ಥಾನದಲ್ಲಿ ಪರಿಶ್ರಮಕ್ಕೆ ಗೌರವ. ಸ್ವಂತ ಉದ್ಯಮ ಕ್ರಮವಾಗಿ ಅಭಿವೃದ್ಧಿ. ದೇವತಾರ್ಚನೆಯಿಂದ ನೆಮ್ಮದಿ ಪ್ರಾಪ್ತಿ.

ಮಕರ: ಸಮಸ್ಯೆಗಳಿಗೆ ತಾತ್ಕಾಲಿಕ ವಿರಾಮ. ಉದ್ಯೋಗ ಕ್ಷೇತ್ರದ ಒತ್ತಡ ಕ್ರಮವಾಗಿ ನಿವಾರಣೆ. ಹೊಸ ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ. ಮಕ್ಕಳ ವಿದ್ಯಾಭ್ಯಾಸದತ್ತ ಗಮನ.

ಕುಂಭ: ಎಂದಿನಂತೆ ಸೇವಾ ಕಾರ್ಯಗಳಲ್ಲಿ ಆಸಕ್ತಿ. ಉದ್ಯೋಗದಲ್ಲಿ ಶ್ಲಾಘನಾರ್ಹ ಸಾಧನೆ. ಮನೆಯಲ್ಲಿ ದೇವತಾ ಕಾರ್ಯ. ವಿವಾಹಾಸಕ್ತರಿಗೆ ಯೋಗ್ಯ ಸಂಬಂಧ ಒದಗುವ ನಿರೀಕ್ಷೆ.

ಮೀನ: ಸ್ಥಗಿತಗೊಂಡ ಕಾರ್ಯಗಳ ಮುಂದುವರಿಕೆ. ಉದ್ಯೋಗದಲ್ಲಿ ಯಶಸ್ಸು. ಸರಕಾರಿ ಅಧಿಕಾರಿಗಳು ಮತ್ತಷ್ಟು ನೌಕರರಿಂದ ಉತ್ತಮ ಸ್ಪಂದನ. ಸೇವಾರೂಪದ ವೃತ್ತಿಯಲ್ಲಿ ಮುನ್ನಡೆ.

Edited By : Vijay Kumar
PublicNext

PublicNext

28/04/2026 07:08 am

Cinque Terre

6.49 K

Cinque Terre

0