ಮೇಷ: ಶಾರೀರಿಕ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ.ಉದ್ಯಮಗಳಿಗೆ ತಕ್ಕಮಟ್ಟಿಗೆ ಅನುಕೂಲ. ಎಳೆಯರು ವಿಹಾರ ತಾಣಗಳಲ್ಲಿ ಎಚ್ಚರ. ಪ್ರಕೃತಿಯ ಜೊತೆಯಲ್ಲಿ ಸಾಮರಸ್ಯದಿಂದ ಆನಂದ.
ವೃಷಭ: ಸಂಸಾರ, ವ್ಯವಹಾರಗಳಲ್ಲಿ ಸಮತೋಲನ. ಉದ್ಯೋಗ ಸ್ಥಾನದಲ್ಲಿ ಸಹಕಾರ. ಗೃಹೋದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ವೃತ್ತಿಪರರಿಗೆ ಸಮಯದ ಸವಾಲು.
ಮಿಥುನ: ಅಪರೂಪಕ್ಕೆ ಒದಗಿದ ಅವಕಾಶದ ಸದುಪಯೋಗ. ಉದ್ಯಮಿಗಳ ಪಾಲಿಗೆ ಒಳ್ಳೆಯ ದಿನ ಅಕಸ್ಮಾತ್ ಧನಲಾಭ ಸಂಭವ.ಎಳೆಯರ ಮನೋವಿಕಾಸಕ್ಕೆ ಸೂಕ್ತ ಪ್ರಯತ್ನ.
ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಸೌಹಾರ್ದ ವಾತಾವರಣ. ಖಾದಿ ಉತ್ಪನ್ನ ವ್ಯಾಪಾರಿಗಳಿಗೆ ಲಾಭ. ಹಿರಿಯರ ಆರೋಗ್ಯ ಗಮನಿಸಿ.
ಸಿಂಹ: ಉದ್ಯೋಗ ಸ್ಥಾನದಲ್ಲಿ ಹೊಸ ಪ್ರಯೋಗಗಳು ಆರಂಭ. ನಿರಂತರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ. ವಸ್ತ್ರ, ಆಭರಣಾದಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವ್ಯಾಪಾರ. ದ್ವಿಚಕ್ರ ವಾಹನ ದುರಸ್ತಿಗಾರರಿಗೆ ಅಧಿಕ ಲಾಭ.
ಕನ್ಯಾ: ಕೃಷಿ ಆಧಾರಿತ ಉದ್ಯಮಗಳಿಗೆ ಅನುಕೂಲದ ದಿನ. ಗೃಹೋಪಕರಣ ಖರೀದಿಗೆ ಧನವ್ಯಯ. ಹೊಲಿಗೆ ಕೆಲಸ ಬಲ್ಲವರಿಗೆ ಉದ್ಯೋಗಾವಕಾಶ.
ತುಲಾ: ಬುದ್ಧಿವಂತಿಕೆಯಿಂದ ಕಠಿನ ಕಾರ್ಯ ಸಾಧನೆ. ಕಸೂತಿ, ಕರಕೌಶಲದ ಕೆಲಸಗಳನ್ನು ಬಲ್ಲವರಿಗೆ ಬೇಡಿಕೆ. ಮಕ್ಕಳ ಬಹುಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ.
ವೃಶ್ಚಿಕ: ದೇವತಾ ಕಾರ್ಯಕ್ಕೆ ಪೂರ್ವಸಿದ್ಧತೆ. ಒಂದಿಲ್ಲೊಂದು ಬಗೆಯ ಹವ್ಯಾಸಕ್ಕೆ ಸಮಯಾನುಕೂಲ. ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಉದ್ಯೋಗ ಅರಸುವ ಶಿಕ್ಷಿತರಿಗೆ ಮಾರ್ಗದರ್ಶನ.
ಧನು: ಅಶಕ್ತರ ಸೇವೆಯಿಂದ ಆನಂದಾನುಭವ. ಉದ್ಯೋಗಸ್ಥರ ನಡುವೆ ಪರಸ್ಪರ ಸಹಕಾರ. ಸಣ್ಣ ಪ್ರಮಾಣದ ಗೃಹೋದ್ಯಮ ಪ್ರಗತಿಯಲ್ಲಿ. ಕರಕುಶಲ ಸಾಮಗ್ರಿ ತಯಾರಕರಿಗೆ ಪ್ರೋತ್ಸಾಹ.
ಮಕರ: ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ.ಅಸಹಾಯಕರಿಗೆ ನೆರವಾಗುವ ಅವಕಾಶ. ಒಡಹುಟ್ಟುಗಳ ಸಹಾಯದಿಂದ ಕ್ಷೇಮ ಪ್ರಾಪ್ತಿ.
ಕುಂಭ: ಕಾರ್ಯಕ್ಷೇತ್ರದಿಂದ ಇನ್ನಷ್ಟು ಸೇವೆ ಅಪೇಕ್ಷೆ. ಉದ್ಯೋಗಸ್ಥರಿಗೆ ಹೊಸ ವಿಭಾಗದಲ್ಲಿ ಯಶಸ್ಸು. ವೃತ್ತಿರಂಗದ ಮಿತ್ರರಿಂದ ಸಹಾಯಕ್ಕೆ ಕೋರಿಕೆ. ಗ್ರಾಹಕರ ವಿಶ್ವಾಸ ಉಳಿಸುವ ಪ್ರಯತ್ನ.
ಮೀನ: ಮತ್ತೆ ತೀವ್ರವಾದ ಕೆಲಸಗಳ ಒತ್ತಡ. ಪ್ರಭಾವಿ ವ್ಯಕ್ತಿಯ ನೆರವಿನ ಭರವಸೆ. ಭೂಮಿ ವ್ಯವಹಾರ ಮತ್ತೆ ಆರಂಭ. ಗುರುಸಮಾನ ವ್ಯಕ್ತಿಯ ಆಗಮನ.
PublicNext
01/05/2026 09:13 am