ಮೇಷ: ಭಗವತ್ಕೃಪೆಯಿಂದ ಎಲ್ಲವೂ ಶುಭ. ಉದ್ಯೋಗದಲ್ಲಿ ತಡೆಯಿಲ್ಲದ ಮುನ್ನಡೆ. ಸಹಚರರ ನಡುವೆ ಸೌಹಾರ್ದ ವೃದ್ಧಿ. ಉದ್ಯಮಗಳ ಆರ್ಥಿಕ ಸ್ಥಿತಿ ಸುಧಾರಣೆ. ಉತ್ಪನ್ನಗಳ ಜನಪ್ರಿಯತೆ ಹೆಚ್ಚಳ.
ವೃಷಭ: ಕೆಲವು ವ್ಯವಸ್ಥೆಗಳ ಪುನಾರಚನೆ. ಸ್ವಂತ ಉದ್ಯಮದಲ್ಲಿ ತಾತ್ಕಾಲಿಕ ಸಮಸ್ಯೆ ಪರಿಹಾರ. ವ್ಯವಹಾರ ಕ್ಷೇತ್ರ ವಿಸ್ತರಣೆ ನಿರ್ವಿಘ್ನ. ಲೇವಾದೇವಿ ವ್ಯವಹಾರಸ್ಥರಿಗೆ ಅಲ್ಪ ಲಾಭ.
ಮಿಥುನ: ಹೆಚ್ಚುಕಡಿಮೆ ಎಲ್ಲ ಕ್ಷೇತ್ರಗಳಲ್ಲಿ ಅನುಕೂಲ. ಉದ್ಯೋಗ, ವ್ಯವಹಾರಗಳಲ್ಲಿ ಪಾಲುದಾರಿಕೆ ವ್ಯವಹಾರದಲ್ಲಿ ಉನ್ನತಿ. ರಕ್ಷಣಾ ರಂಗದಲ್ಲಿ ಸೇವೆ ಸಲ್ಲಿಸುವವರಿಗೆ ವಿಶಿಷ್ಟ ಗೌರವ.
ಕರ್ಕಾಟಕ: ವಯಸ್ಸು, ವಿದ್ವತ್ತಿಗೆ ಗೌರವ ಪ್ರಾಪ್ತಿ. ಉದ್ಯಮದಲ್ಲಿ ಅನಿರೀಕ್ಷಿತ ಪೈಪೋಟಿಯ ಸಾಧ್ಯತೆ. ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಪರಿಸರ ರಕ್ಷಣೆಯ ಚಟುವಟಿಕೆಗಳಲ್ಲಿ ಆಸಕ್ತಿ.
ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ ಹೊಂದುವ ಪ್ರಯತ್ನ. ಸ್ವಂತ ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಹತ್ತಿರದ ದೇವಾಲಯಕ್ಕೆ ಭೇಟಿ. ಉತ್ತರ ದಿಕ್ಕಿನಿಂದ ಶುಭ ಸಮಾಚಾರ.
ಕನ್ಯಾ: ಅಕಸ್ಮಾತ್ ಧನಪ್ರಾಪ್ತಿಯ ಸಾಧ್ಯತೆ. ಸರಕಾರಿ ಉದ್ಯೋಗಿಗಳಿಗೆ ದಿಢೀರ್ ವರ್ಗಾವಣೆ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಗೆ ಪ್ರಥಮ ಪ್ರಾಶಸ್ತ್ಯ ಯೋಜನೆಯಲ್ಲಿ ಹೂಡಿಕೆಯಿಂದ ಲಾಭ.
ತುಲಾ: ದೇವತಾನುಗ್ರಹ ಪ್ರಾಪ್ತಿಗೆ ತೀವ್ರ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯಿಂದ ಕಾರ್ಯನಿರ್ವಹಣೆ. ಆಪ್ತರಿಂದ ಸಕಾಲಿಕ ಸಲಹೆ ಹಾಗೂ ಸಹಕಾರ. ವಿಸ್ತೃತ ವ್ಯವಹಾರ ಕ್ಷೇತ್ರದಲ್ಲಿ ಮುನ್ನಡೆ.
ವೃಶ್ಚಿಕ: ಗುರು, ದೇವತಾನುಗ್ರಹದಿಂದ ಯಶಸ್ಸು. ಉದ್ಯೋಗದಲ್ಲಿ ಪ್ರಗತಿಗೆ ಅನುಕೂಲ ಪರಿಸರ. ಸರಕಾರಿ ನೌಕರರಿಗೆ ಶುಭ ಸಮಾಚಾರ. ಸ್ವಂತ ಉದ್ಯಮ ವಿಸ್ತರಣೆಗೆ ಕಾರ್ಯಯೋಜನೆ.
ಧನು: ಆರೋಗ್ಯ ಸುಧಾರಣೆಯಿಂದ ಹೆಚ್ಚಿದ ಕಾರ್ಯೋತ್ಸಾಹ. ಹಳೆಯ ಹಿತೈಷಿಯ ಸಲಹೆಯಿಂದ ಹೊಸ ಅವಕಾಶ ಪ್ರಾಪ್ತಿ. ಉದ್ಯೋಗದಲ್ಲಿ ಗೌರವದ ಸ್ಥಾನ. ಆದಾಯ ಹೆಚ್ಚಳದ ಯೋಜನೆಗಳು ಮುನ್ನಡೆ.
ಮಕರ: ಆತ್ಮಬಲ ವೃದ್ಧಿಗೆ ವಿಶೇಷ ಪ್ರಯತ್ನ. ಕಿರಿಯರಿಗೆ ಸಹಾಯ ಮಾಡಿದ ತೃಪ್ತಿ. ಸ್ತ್ರೀಯರಿಗೆ ಪತಿಗೃಹದವರಿಂದ ಸಹಾಯ. ಉದ್ಯೋಗ ಪರಿವರ್ತನೆ ಪ್ರಯತ್ನಕ್ಕೆ ಹಂತಹಂತವಾಗಿ ಯಶಸ್ಸು.
ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಗೌರವದ ಸ್ಥಾನ ಮುಂದುವರಿಕೆ. ಸ್ವಂತ ಉದ್ಯಮದ ಹಿತ ಅಬಾಧಿತ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಉತ್ತಮ ಆದಾಯ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ.
ಮೀನ: ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಸುಗಮ. ಉದ್ಯೋಗ ಸ್ಥಾನದಲ್ಲಿ ಅನುಕೂಲದ ಸ್ಥಿತಿ. ಸೇವಾರೂಪದ ಕಾರ್ಯಗಳಿಗೆ ಅನುಕೂಲದ ವಾತಾವರಣ. ಸರಕಾರಿ ಅಧಿಕಾರಿಗಳ ಹಾಗೂ ನೌಕರರ ಉತ್ತಮ ಸ್ಪಂದನ.
PublicNext
29/04/2026 08:19 am