ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 05-05-2026

ಮೇಷ: ಅವಸರ ಪಡದೆ ಸಾವಧಾನವಾಗಿ ಸಾಗಿ. ಕೆಲಸದ ಹೊರೆ ಹೆಚ್ಚಾಗುವ ಸಾಧ್ಯತೆ. ಎಣಿಸಿದ ವೇಗದಲ್ಲಿ ಕಾರ್ಯ ಮುಗಿಸಲು ಎಲ್ಲರ ಸಹಕಾರ. ವಾಹನ ಚಾಲನೆಯಲ್ಲಿ ಎಚ್ಚರ. ವಸ್ತ್ರ ವ್ಯಾಪಾರಿಗಳಿಗೆ ವಿಶೇಷ ಲಾಭ.

ವೃಷಭ: ಉದ್ಯೋಗ ಸ್ಥಾನದಲ್ಲಿ ಸಹಕಾರ, ಸೌಹಾರ್ದ. ಗೃಹೋದ್ಯಮದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಆರೋಗ್ಯದ ಕುರಿತು ಸಕಾಲಿಕ ಜಾಗ್ರತೆ. ಉದ್ಯೋಗಾಸಕ್ತರಿಗೆ ನೌಕರಿ ಸಿಗುವ ಸೂಚನೆ. ವಿವಾಹಾಪೇಕ್ಷಿಗಳಿಗೆ ಶುಭ ಸೂಚನೆ.

ಮಿಥುನ: ಉದ್ಯೋಗಸ್ಥರ ಪಾಲಿಗೆ ಸತ್ವಪರೀಕ್ಷೆಯ ದಿನ. ಉದ್ಯಮಿಗಳ ಕೀರ್ತಿ ವರ್ಧನೆಗೆ ಪೂರಕ ವಾತಾವರಣ. ಪಿತ್ರಾರ್ಜಿತ ಆಸ್ತಿಯಲ್ಲಿ ಫಸಲು ಹೆಚ್ಚಳ. ಪರಿಸರ ರಕ್ಷಣೆಗೆ ಶ್ರಮದಾನ. ಮನೆಮಂದಿಯ ನಡುವೆ ಪ್ರೀತಿ, ಸಾಮರಸ್ಯ ವೃದ್ಧಿ.

ಕರ್ಕಾಟಕ: ಯಾವುದೇ ಬಗೆಯ ಆಮಿಷಗಳ ಕುರಿತು ಎಚ್ಚರ. ಹಿರಿಯರನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆ ನಿವಾರಣೆ. ಖಾದಿ ಉದ್ಯಮ ಬೆಳೆಸಲು ಆಸಕ್ತಿ. ಆಭರಣ ತಯಾರಿ ಬಲ್ಲವರಿಗೆ ಉದ್ಯೋಗಾವಕಾಶ.

ಸಿಂಹ: ಉದ್ಯೋಗ ಸ್ಥಾನದಲ್ಲಿ ಹೊಸ ಪ್ರಯೋಗಗಳು. ವಸ್ತ್ರ, ಆಭರಣಾದಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವ್ಯಾಪಾರ. ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್‌ ಕೆಲಸಗಾರರಿಗೆ ಕೈತುಂಬಾ ಕೆಲಸ. ಮನೆಯವರೊಂದಿಗೆ ದೇವೀಕ್ಷೇತ್ರಕ್ಕೆ ಭೇಟಿ.

ಕನ್ಯಾ: ಎಲೆಕ್ಟ್ರಾನಿಕ್ಸ್‌ , ಎಲೆಕ್ಟ್ರಿಕಲ್ಸ್ ವ್ಯಾಪಾರ ವೃದ್ಧಿ. ವೃತ್ತಿ ಪರಿಣತಿ ಹೆಚ್ಚಿಸಿಕೊಳ್ಳಲು ನುರಿತವರ ಮಾರ್ಗದರ್ಶನ. ಕುಟುಂಬದ ಮನೆಯಲ್ಲಿ ವಿವಾಹ ಸಂಭ್ರಮ. ಮಕ್ಕಳ ಆತ್ಮವಿಶ್ವಾಸ ವೃದ್ಧಿಗೆ ಪ್ರಯತ್ನ.

ತುಲಾ: ನಿರಾಳವಾದ ಮನಃಸ್ಥಿತಿಯ ಅನುಭವ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಕಸೂತಿ, ಕರಕೌಶಲದ ಕೆಲಸಗಳನ್ನು ಬಲ್ಲವರಿಗೆ ಬೇಡಿಕೆ. ಮಕ್ಕಳ ಬಹುಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ. ತಾಯಿಯ ಕಡೆಯ ಬಂಧುಗಳ ಆಗಮನ.

ವೃಶ್ಚಿಕ: ಉದ್ಯೋಗಸ್ಥರಿಗೆ ಹರ್ಷದ ಸನ್ನಿವೇಶ. ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಹೊಲಿಗೆ ಕೆಲಸ ಬಲ್ಲವರಿಗೆ ಕೆಲಸಕ್ಕೆ ಕರೆ. ಉದ್ಯೋಗ ಅರಸುವ ಶಿಕ್ಷಿತರಿಗೆ ಮಾರ್ಗದರ್ಶನ. ಸಂಗೀತಾದಿ ಕಲೆಗಳ ಆಸ್ವಾದನೆಯಿಂದ ಆನಂದ.

ಧನು: ಉದ್ಯೋಗಸ್ಥರ ನಡುವೆ ಪರಸ್ಪರ ಸಹಕಾರ. ಸಣ್ಣ ಪ್ರಮಾಣದ ಗೃಹೋದ್ಯಮ ಪ್ರಗತಿಯಲ್ಲಿ. ಪಾಲುದಾರಿಕೆ ವ್ಯವಹಾರದಲ್ಲಿ ಶೀಘ್ರ ಪ್ರಗತಿ. ಉದ್ಯೋಗಾಸಕ್ತರಿಗೆ ಯೋಗ್ಯ ಅವಕಾಶ ಗೋಚರ. ಪ್ರತಿಕೂಲ ಹವೆಯ ಕುರಿತು ಎಚ್ಚರ.

ಮಕರ: ಸಂಸಾರ, ಉದ್ಯೋಗ ಇವೆರಡರ ಸಮತೋಲನದಲ್ಲಿ ತೃಪ್ತಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ವೃತ್ತಿಪರ ಉದ್ಯೋಗಸ್ಥರಿಗೆ ಸಮಯದ ಸವಾಲು. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ.

ಕುಂಭ: ಕಾರ್ಯರಂಗದ ಕರೆಗಳಿಗೆ ಸ್ಪಂದನ. ಉದ್ಯೋಗಸ್ಥರಿಗೆ ಹೊಸ ವಿಭಾಗಕ್ಕೆ ಪ್ರವೇಶ. ವೃತ್ತಿರಂಗದ ಮಿತ್ರರಿಂದ ಸಹಾಯಕ್ಕೆ ಕೋರಿಕೆ. ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸುವ ಒತ್ತಡ. ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಶುಭ ದಿನ.

ಮೀನ: ಸಹಜವಾದ ಕೆಲಸಗಳ ಒತ್ತಡ. ಜನಸೇವಾ ಕಾರ್ಯಗಳಿಗೆ ಪ್ರೋತ್ಸಾಹ. ಭೂಮಿ ಖರೀದಿ, ಮಾರಾಟದಲ್ಲಿ ಲಾಭ. ಗುರುಸಮಾನ ವ್ಯಕ್ತಿಯ ಮಾರ್ಗದರ್ಶನ. ಮಕ್ಕಳಿಗೆ ಧಾರ್ಮಿಕ ವಿಧಿಗಳಲ್ಲಿ ಶಿಕ್ಷಣ ನೀಡುವ ಕ್ರಮಗಳ ಶುಭಾರಂಭ.

Edited By : Vijay Kumar
PublicNext

PublicNext

05/05/2026 07:55 am

Cinque Terre

7.11 K

Cinque Terre

0