ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 2.5.2026

ಮೇಷ: ಸಂಗಾತಿಯಿಂದ ಆರ್ಥಿಕ ಸಹಾಯ ದೊರೆಯಲಿದೆ. ಸಹೋದರನ ಆರೋಗ್ಯದಲ್ಲಿ ಚೇತರಿಕೆ. ಪಾಲುದಾರಿಕೆಯಲ್ಲಿ ಅಭಿವೃದ್ಧಿ.

ವೃಷಭ: ಖಾಸಗಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಇಂಧನಗಳ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ಇಷ್ಟದೇವರನ್ನು ನೆನಪಿಟ್ಟು ಸ್ಮರಿಸಿ.

ಮಿಥುನ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ದೂರಾ ಲೋಚನೆಗಳು ಕಾರ್ಯಗತ. ಗುಪ್ತ ವಿಷಯಗಳಿಂದ ಲಾಭ ಮತ್ತು ಅನುಕೂಲ.

ಕಟಕ: ಉದ್ಯೋಗ ಲಾಭವಾಗಿ ಸಮಾಧಾನ. ಸ್ಥಿರಾಸ್ತಿ ಮತ್ತು ಗೃಹ ನಿರ್ವಣದ ಆಸೆ. ಹೃದಯ ಸಂಬಂಧಿ ವ್ಯಾಧಿ ಗುಣಮುಖವಾಗಲಿದೆ.

ಸಿಂಹ: ಮಕ್ಕಳಿಗೋಸ್ಕರ ಖರ್ಚು. ಪ್ರೇಮದಿಂದ ತೊಂದರೆ. ಸಹೋದರಿ ಆರೋಗ್ಯದಲ್ಲಿ ಸುಧಾರಣೆ. ಭೂ ವ್ಯವಹಾರದಲ್ಲಿ ಪ್ರಗತಿ.

ಕನ್ಯಾ: ಔಷದ ವ್ಯಾಪಾರದಲ್ಲಿ ಆರ್ಥಿಕ ಅನುಕೂಲ. ಆಕಸ್ಮಿಕ ಪ್ರಯಾಣ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಕಷ್ಟದಲ್ಲಿರುವವರಿಗೆ ಸಹಾಯ.

ತುಲಾ: ಗೃಹ ನಿರ್ಮಾಣ ವ್ಯವಹಾರದಲ್ಲಿ ಅನುಕೂಲ. ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ. ನೆರೆಹೊರೆ ಯವರಿಂದ ಆರ್ಥಿಕ ಸಹಾಯ.

ವೃಶ್ಚಿಕ: ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ. ರಾಜಕೀಯ ರಂಗದವರಿಗೆ ಪದವಿ. ಅಧ್ಯಾತ್ಮದಲ್ಲಿ ಇದ್ದ ಗೊಂದಲ ಪರಿಹಾರ.

ಧನಸ್ಸು: ಮಕ್ಕಳೊಡನೆ ದೂರ ಪ್ರಯಾಣದ ಸಾಧ್ಯತೆ. ಸ್ನಾಯು ಸಂಬಂಧಿತ ರೋಗ ಉಪಶಮನ. ಪೊಲೀಸ್ ಸ್ಟೇಷನ್​ಗೆ ಅಲೆದಾಟ.

ಮಕರ: ಆಸೆ-ಆಕಾಂಕ್ಷೆಗೆ ಹಣ ವ್ಯಯವಾಗಲಿದೆ. ನವದಂಪತಿಗಳಿಗೆ ಶುಭಸುದ್ದಿ. ಲೆಕ್ಕಪರಿಶೋಧಕರಿಗೆ ಶುಭದಿನ. ಇಷ್ಟದೇವರನ್ನು ಭಜಿಸಿ.

ಕುಂಭ: ಸ್ಥಿರಾಸ್ತಿ ಖರೀದಿಗೆ ಸೂಕ್ತ ಸಮಯ. ಅಪರಿಚಿತರಿಂದ ಅನುಕೂಲ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಮಿತ್ರರಿಂದ ನೆರವು.

ಮೀನ: ಅನಿರೀಕ್ಷಿತ ಧನಾಗಮನವಾಗಲಿದೆ. ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಒತ್ತಡ. ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಾಧ್ಯವಾಗಲಿದೆ.

Edited By : Nirmala Aralikatti
PublicNext

PublicNext

02/05/2026 07:33 am

Cinque Terre

32.86 K

Cinque Terre

0