ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಲಕಮಾಪುರದ ಬಸವಣ್ಣ ದೇವರ ಮೂರ್ತಿ ಮೇಲಿದ್ದ ಬೆಳ್ಳಿಯ ಆಭರಣ ಕಳ್ಳತನ

ಧಾರವಾಡ: ದೇವಸ್ಥಾನದ ಕೀಲಿ ಮುರಿದು ಒಳನುಗ್ಗಿದ ಖದೀಮರು ದೇವರ ಮೂರ್ತಿ ಮೇಲಿದ್ದ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಲಕಮಾಪುರ ಗ್ರಾಮದ ಬಸವಣ್ಣ ದೇವರ ದೇವಸ್ಥಾನದಲ್ಲೇ ಈ ಕಳ್ಳತನ ನಡೆದಿದೆ. ತಡರಾತ್ರಿ ದೇವಸ್ಥಾನಕ್ಕೆ ಬಂದ ಖದೀಮರು ಕೀಲಿ ಮುರಿದು ಒಳನುಗ್ಗಿ ಬಸವಣ್ಣ ದೇವರ ಮೂರ್ತಿ ಮೇಲಿದ್ದ ಸುಮಾರು 1 ಕೆಜಿಗೂ ಅಧಿಕ ತೂಕದ ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಬೆಳಿಗ್ಗೆ ಅರ್ಚಕರು ದೇವಸ್ಥಾನಕ್ಕೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೇ ಸ್ಥಳೀಯರು ಗರಗ ಠಾಣೆ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರಿಂದ ಗರಗ ವೃತ್ತ ಸಿಪಿಐ ಶಿವಯೋಗಿ ಲೋಹಾರ್, ಪಿಎಸ್ಐ ಸಿದ್ರಾಮಪ್ಪ ಉಣ್ಣದ ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

Edited By : Somashekar
Kshetra Samachara

Kshetra Samachara

28/04/2026 02:01 pm

Cinque Terre

13.87 K

Cinque Terre

0

ಸಂಬಂಧಿತ ಸುದ್ದಿ