ಬೈಂದೂರು: ಬೈಂದೂರು ಬಸ್ ನಿಲ್ದಾಣದಲ್ಲಿ ನಡೆದ ಚಿನ್ನದ ಬಳೆ ಸುಲಿಗೆ ಪ್ರಕರಣವನ್ನು ಪೊಲೀಸರು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಹನಾ ಪೈ ಅವರು ಧಾರವಾಡ ಕಡೆಗೆ ತೆರಳಲು ಬಸ್ ಹತ್ತಲು ಹೋಗುತ್ತಿದ್ದ ವೇಳೆ, ಇಬ್ಬರು ಮಹಿಳೆಯರು ಅವರ ಗಮನವನ್ನು ಬೇರೆಡೆಗೆ ಸೆಳೆದಿದ್ದಾರೆ. ಅದೇ ಸಮಯದಲ್ಲಿ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬರು ಅವರ ಬಲಗೈಯಲ್ಲಿದ್ದ ಚಿನ್ನದ ಬಳೆಯನ್ನು ಕಟ್ಟರ್ ಬಳಸಿ ಕತ್ತರಿಸಿ, ಅವರನ್ನು ದೂಡಿ ಸುಲಿಗೆ ಮಾಡಿಕೊಂಡು ಮಹಿಳೆಯರೊಂದಿಗೆ ಪರಾರಿಯಾಗಿದ್ದನು.
ಈ ಕುರಿತು ಸಹನಾ ಪೈ ನೀಡಿದ ದೂರಿನ ಆಧಾರದಲ್ಲಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 43/2026 ಕಲಂ 309 (40) BNS ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಕುಂದಾಪುರ ವೃತ್ತ ನಿರೀಕ್ಷಕರಾದ ಸಂತೋಷ ಕಾಯ್ಕಿಣಿ ಅವರು ನಡೆಸಿ, ಮುಂಬೈ ಮೂಲದ ಆರೋಪಿಗಳಾದ
ಅವಿನಾಶ್ ಸುನಿಲ್ ಗಾಯಕವಾಡ (27) ಸಂತೋಷಿ ವಿಶಾಲ್ ಜಾದವ (31) ಅರ್ಚನಾ ಸುಶೀಲ್ ಜಾದವ (40) ಇವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಸುಲಿಗೆ ಮಾಡಲಾಗಿದ್ದ ಸುಮಾರು 17.27 ಗ್ರಾಂ ತೂಕದ (ಅಂದಾಜು ಮೌಲ್ಯ ₹2.5 ಲಕ್ಷ) ಚಿನ್ನದ ಬಳೆ, ಬಳಸಿದ ಕಟ್ಟರ್ ಹಾಗೂ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಹೆಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಸಂತೋಷ ಕಾಯ್ಕಿಣಿ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಾಚರಣೆಯಲ್ಲಿ ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ಸುನಿಲ್ ಕುಮಾರ್ ಬಿ.ವೈ., ನವೀನ್ ಬೋರ್ಕರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
Kshetra Samachara
29/04/2026 04:00 pm
LOADING...